ಗಡ್ಚಿರೋಲಿ (ಮಹಾರಾಷ್ಟ್ರ):ಶನಿವಾರ ಇಪ್ಪತ್ತಾರು ಮಾವೋವಾದಿಗಳನ್ನುಹತ್ಯೆಗೈದ ಗಡ್ಚಿರೋಲಿ ಎನ್‌ಕೌಂಟರ್ ಕುರಿತು ಪ್ರತಿಕ್ರಿಯಿಸಿರುವ ಮಾವೋವಾದಿಗಳು, ಶೂಟೌಟ್ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಭದ್ರಾದ್ರಿ ಕೊತಗುಡೆಂ ಮತ್ತು ಪೂರ್ವ ಗೋದಾವರಿ ಜಿಲ್ಲಾ ಮಾವೋವಾದಿವಿಭಾಗ ಸಮಿತಿಯು ಪತ್ರದ ಮೂಲಕ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಮಾವೋವಾದಿ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದನ್ನು ಕೊನೆಗೊಳಿಸಲು ತಮ್ಮ ದಾಳಿಯನ್ನು ತೀವ್ರಗೊಳಿಸಿವೆ ಎಂದಿದೆ.
ಛತ್ತೀಸ್‌ಗಢ ಮತ್ತು ಗಡ್‌ಚಿರೋಲಿಯ ಬುಡಕಟ್ಟು ಪ್ರದೇಶಗಳಲ್ಲಿ ಅಪಾರ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಗೆ ಅಡ್ಡಿಯಾಗುತ್ತಿರುವ ಮಾವೋವಾದಿ ಚಳವಳಿಯ ವಿರುದ್ಧದ ದಮನದ ಭಾಗವಾಗಿ ಈ ದಾಳಿಗಳು ನಡೆದಿವೆ ಎಂದು ಪತ್ರದಲ್ಲಿ ಬರೆಯಲಾಗಿದೆ.