ಕರ್ನಾಟಕ

karnataka

ETV Bharat / bharat

ವಾರ್ಷಿಕೋತ್ಸವಕ್ಕೆ ಬುಡಕಟ್ಟು ಜನಾಂಗ ಆಹ್ವಾನಿಸಿ ಪೋಸ್ಟರ್ ಅಂಟಿಸಿದ ಮಾವೋ ಸಂಘಟನೆ - ಮಾವೋವಾದಿಗಳು

ನಗರದ ಜಿ.ಮಡುಗುಲಾ ಮಂಡಲ್ ಮಡ್ಡಿ ಗರುವು ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಸ್ಟರ್​​ಗಳ ಅಂಟಿಸಲಾಗಿದೆ. ಈ ಪೋಸ್ಟರ್​​ನಲ್ಲಿ ಬುಡುಕಟ್ಟು ಜನಾಂಗದವರು ವಾರ ಪೂರ್ತಿ ಮಾವೋವಾದಿಗಳ ಸಮಾರಂಭದಲ್ಲಿ ಭಾಗಿಯಾಗಿ, ಈ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

Maoist posters surface in Andhra Pradesh
ಪೋಸ್ಟರ್ ಅಂಟಿಸಿದ ಮಾವೋ ಸಂಘಟನೆ

By

Published : Nov 30, 2020, 10:47 AM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಸೈನ್ಯದ (ಪಿಎಲ್‌ಜಿಎ) 20ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿಷೇಧಿತ ಸಿಪಿಐ (ಮಾವೋವಾದಿ) ಹಾಕಿರುವ ಪೋಸ್ಟರ್‌ಗಳು ನಗರದಲ್ಲಿ ಕಂಡು ಬಂದಿವೆ.

ನಗರದ ಜಿ.ಮಡುಗುಲಾ ಮಂಡಲ್ ಮಡ್ಡಿ ಗರುವು ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಸ್ಟರ್​​ಗಳ ಅಂಟಿಸಲಾಗಿದೆ. ಈ ಪೋಸ್ಟರ್​​ನಲ್ಲಿ ಬುಡುಕಟ್ಟು ಜನಾಂಗದವರು ವಾರ ಪೂರ್ತಿ ಮಾವೋವಾದಿಗಳ ಸಮಾರಂಭದಲ್ಲಿ ಭಾಗಿಯಾಗಿ, ಈ ವಾರ್ಷಿಕೋತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

1999ರ ಡಿಸೆಂಬರ್ 2ರದು ನಿಷೇಧಕ್ಕೊಳಗಾಗಿದ್ದ ಸಂಘಟನೆ ಕೇಂದ್ರ ಸಮಿತಿ ಸದಸ್ಯರಾಗಿದ್ದ ಸೀಲಂ ನರೇಶ್, ನಲ್ಲಾ ಆದಿ ರೆಡ್ಡಿ ಮತ್ತು ಯರ್ರಮಡ್ಡಿ ಸಂತೋಷ್ ರೆಡ್ಡಿ ಅವರನ್ನು ಭದ್ರತಾ ಪಡೆಗಳು ಗುಂಡಿನ ಕಾಳಗದಲ್ಲಿ ಬಲಿ ಪಡೆಯಲಾಗಿತ್ತು. ಇವರ ಹತ್ಯೆಯನ್ನು ಖಂಡಿಸಿ ಮಾವೋವಾದಿಗಳು ಡಿಸೆಂಬರ್ 2ರಿಂದ 8ರ ವರೆಗೆ ಪಿಎಲ್​​​ಜಿಎ ವಾರ್ಪಿಕ ವಾರವನ್ನಾಗಿ ಆಚರಿಸಲು ಕರೆ ನೀಡಿದ್ದವು.

ABOUT THE AUTHOR

...view details