ಕರ್ನಾಟಕ

karnataka

ETV Bharat / bharat

ಮಹಿಳಾ ಕಾರ್ಯಕರ್ತೆಯರ ಮೇಲೆ ಮಾವೋ ನಾಯಕನಿಂದ ಲೈಂಗಿಕ ದೌರ್ಜನ್ಯ: ತೆಲಂಗಾಣ ಪೊಲೀಸರ ಆರೋಪ! - ಮಾವೋವಾದಿ ನಾಯಕ ಮೇಲೆ ತೆಲಂಗಾಣ ಪೊಲೀಸರು ಆರೋಪ

ಮಹಿಳಾ ಕಾರ್ಯಕರ್ತರ ಮೇಲೆ ಮಾವೋವಾದಿ ನಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ

Maoist leader sexually assaulted women cadre  Telangana police claims on Maoist leader  Telangana police news  ಮಹಿಳಾ ಕಾರ್ಯಕರ್ತರ ಮೇಲೆ ಮಾವೋವಾದಿ ನಾಯಕನಿಂದ ಲೈಂಗಿಕ ದೌರ್ಜನ್ಯ  ಮಾವೋವಾದಿ ನಾಯಕ ಮೇಲೆ ತೆಲಂಗಾಣ ಪೊಲೀಸರು ಆರೋಪ  ತೆಲಂಗಾಣ ಪೊಲೀಸ್​ ಸುದ್ದಿ
ತೆಲಂಗಾಣ ಪೊಲೀಸ್​ ಸುದ್ದಿ

By

Published : Mar 18, 2022, 11:12 AM IST

ಹೈದರಾಬಾದ್: ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ನಾಯಕರೊಬ್ಬರು ಕೆಲವು ಮಹಿಳಾ ಕಾರ್ಯಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ತೆಲಂಗಾಣ ರಾಜ್ಯ ಪೊಲೀಸರು ಹೇಳಿದ್ದಾರೆ.

ಸಿಪಿಐ (ಮಾವೋವಾದಿ) ಪಕ್ಷದ ನಾಯಕ ಆಜಾದ್ ವಿರುದ್ಧ ಕಾನೂನುಬಾಹಿರ ಸಂಘಟನೆಗಾಗಿ ಕೆಲಸ ಮಾಡುವ ಕೆಲವು ಮಹಿಳೆಯರಿಂದ ಲೈಂಗಿಕ ಕಿರುಕುಳದ ದೂರುಗಳ ಕೇಳಿ ಬಂದಿವೆ. ಆದರೂ ಆಜಾದ್​ ವಿರುದ್ಧ ಯಾವುದೇ ಕ್ರಮ ಪ್ರಾರಂಭಿಸಿಲ್ಲ ಎಂದು ಭದ್ರಾದ್ರಿ ಕೊತಗುಡೆಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ದತ್ ಹೇಳಿದ್ದಾರೆ.

ಓದಿ:ಸುಟ್ಟಗಾಯ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ 2021ರ ವಿಶ್ವಸುಂದರಿ ಸ್ಪರ್ಧೆ ರನ್ನರ್ ಅಪ್!

ಛತ್ತೀಸ್‌ಗಢದ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಮಹಿಳಾ ಸದಸ್ಯೆಯೊಬ್ಬರ ಮೇಲೆ ಆಜಾದ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಸಿಕ್ಕಿದೆ. ಘಟನೆಯ ಕುರಿತು ಆಕೆ ಮಾವೋವಾದಿ ಪಕ್ಷದ ನಾಯಕರಿಗೆ ದೂರು ನೀಡಿದರೂ ಆಜಾದ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿ ಆರೋಪಿಸಿದ್ದಾರೆ.

ಈ ಹಿಂದೆಯೂ ಆಜಾದ್ ಮಾವೋವಾದಿ ಪಕ್ಷದಲ್ಲಿ ಕೆಲಸ ಮಾಡುವ ಇತರ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಬುಡಕಟ್ಟು ಮಹಿಳೆಯರನ್ನು ಮಾವೋವಾದಿ ಪಕ್ಷದ ನಾಯಕರು ಬಲವಂತವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.


ABOUT THE AUTHOR

...view details