ಚೈಬಾಸಾ (ಜಾರ್ಖಂಡ್) : ಜಾರ್ಖಂಡ್‌ನಲ್ಲಿ ಜಿಲ್ಲಾ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿ ಕಾರ್ಯಾಚರಣೆ ನಡೆಸಿ 40 ಕೆಜಿ ತೂಕದ ಎರಡು ದೊಡ್ಡ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಾಶ ಪಡಿಸಿದ್ದಾರೆ.
ಮಾವೋವಾದಿಗಳ ಸುಧಾರಿತ ಸ್ಫೋಟಕ ಸಾಧನಗಳ ನಾಶ - ಜಾರ್ಖಂಡ್
ಚೈಬಾಸಾದ ಗೋಯೆಲ್ಕೆರಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಇದನ್ನು ವಶಪಡಿಸಿಕೊಳ್ಳಲಾಗಿದೆ.

ಮಾವೋವಾದಿಗಳ ಸುಧಾರಿತ ಸ್ಫೋಟಕ ಸಾಧನಗಳ ನಾಶ
ಮಾವೋವಾದಿಗಳ ಸುಧಾರಿತ ಸ್ಫೋಟಕ ಸಾಧನಗಳ ನಾಶ
ಚೈಬಾಸಾದ ಗೋಯೆಲ್ಕೆರಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಇದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ಫೋಟಕಗಳು ಮಾವೋವಾದಿಗಳಿಗೆ ಸೇರಿದ್ದು ಎನ್ನಲಾಗಿದ್ದು, ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ಸ್ಫೋಟಿಸಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಅವುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಅಲ್ಲೆ ಇರಿಸಿ ನಂತರ ಬಾಂಬ್ ವಿಲೇವಾರಿ ದಳವು ಅದೇ ಸ್ಥಳದಲ್ಲಿ ಬಾಂಬ್‌ಗಳನ್ನು ಡಿಫ್ಯೂಸ್ ಮಾಡಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated : Feb 11, 2021, 9:47 PM IST