ಕರ್ನಾಟಕ

karnataka

ETV Bharat / bharat

ಮುಂದಿನ 3 ದಿನ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚಳಿ ತೀವ್ರ - ಚಳಿ ತೀವ್ರ ಪ್ರಮಾಣದಲ್ಲಿ ಇರಲಿದೆ

ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ದಟ್ಟ ಮಂಜಿನಿಂದಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಮುಂದಿನ ಮೂರು ದಿನ ಚಳಿಗೆ ನಡುಗಲಿದೆ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯ
many-states-of-north-india-including-delhi-will-experience-cold-for-the-next-three-days

By

Published : Jan 16, 2023, 10:32 AM IST

ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳು ಈಗಾಗಲೇ ಚಳಿಗೆ ತತ್ತರಿಸಿವೆ. ಮುಂದಿನ ಮೂರು ದಿನಗಳ ಕಾಲ ಉತ್ತರದ ವಿವಿಧ ರಾಜ್ಯಗಳಲ್ಲಿ ಚಳಿ ತೀವ್ರ ಪ್ರಮಾಣದಲ್ಲಿ ಇರಲಿದೆ. ಬುಧವಾರದವರೆಗೆ ಈ ವಾತಾವರಣ ಹೀಗೆಯೇ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಜನವರಿ 18ರಂದು ಕನಿಷ್ಠ 4 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಶೀತ ಅಲೆ ನಗರಿಯಲ್ಲಿ ನಿರಂತರವಾಗಿದೆ. ದಟ್ಟ ಮಂಜಿನಿಂದಾಗಿ ಇಂದು ಉತ್ತರ ರೈಲ್ವೆ ವಿಭಾಗದಲ್ಲಿ 13 ರೈಲುಗಳು ತಡವಾಗಿ ಸಂಚಾರ ಆರಂಭಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರಾಜಸ್ಥಾನ, ಪಂಜಾಬ್​, ಹರಿಯಾಣ ಚಂಢೀಗಢ ಮತ್ತು ದೆಹಲಿಯಲ್ಲಿ ಜನವರಿ 17ರವರೆಗೆ ಚಳಿ ಮುಂದುವರೆಯಲಿದೆ. ಭಾರಿ ಚಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್​ಪುರ್​ನಲ್ಲಿ ಜನವರಿ 17ರವರೆಗೆ ಶಾಲೆಗಳನ್ನು ಮುಚ್ಚಲು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಮೀರತ್​ನಲ್ಲಿ 8ನೇ ತರಗತಿಯವರೆಗೆ ಜ. 17ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಢಿಗಢದಲ್ಲೂ ಕೂಡ 8ನೇ ತರಗತಿವರೆಗಿನ ಮಕ್ಕಳಿಗೆ ಚಳಿಗಾಲದ ರಜೆಯನ್ನು ವಿಸ್ತರಣೆ ಮಾಡಲಾಗಿದೆ.

ದಟ್ಟ ಮಂಜು: ಮುಂದಿನ ಐದು ದಿನಗಳ ಕಾಲ ದೇಶದ ವಾಯುವ್ಯ ಪ್ರದೇಶದಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು, ಗೋಚರತೆ ಪ್ರಮಾಣ ಕಡಿಮೆ ಇರಲಿದೆ. ಪಂಜಾಬ್​, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಮುಂದಿನ ಐದು ದಿನಗಳ ಕಾಲ ಬೆಳಗಿನ ಹೊತ್ತು ಮಂಜು ಕವಿದ ವಾತಾವರಣ ಇರಲಿದೆ. ಹಿಮಾಲಯದಲ್ಲಿನ ವಾಯುವ್ಯ ಗಾಳಿಯಿಂದ ವಾಯುವ್ಯ ಪ್ರದೇಶದಲ್ಲಿ ಕನಿಷ್ಠ ತಾಪಪಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್​ ಇರಲಿದೆ ಎಂದು ಐಎಂಡಿ ಹೇಳಿದೆ. ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಮೈನಸ್ 1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಜನರು ಚಳಿಯಿಂದ ತತ್ತರಿಸುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ಸಾಮಾನ್ಯ ರಾಜಧಾನಿಯಾದ ಚಂಡಿಗಢದಲ್ಲಿ 6.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಚಳಿಗೆ ನಡುಗಿದ ಕರ್ನಾಟಕ: ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣವಿದೆ. ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಮುಂಬೈನಲ್ಲೂ ಕೂಡ ಭಾನುವಾರ ರಾತ್ರಿ ಕನಿಷ್ಠ ತಾಪಮಾನ 13.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಶನಿವಾರ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಹಿಮಪಾತ ಸಂಭವಿಸಿವೆ. ಅದೃಷ್ಟವಶಾತ್​​ ಯಾವುದೇ ಜೀವಹಾನಿ ವರದಿಯಾಗಿಲ್ಲ. ಶುಕ್ರವಾರ ಸಾಧಾರಣದಿಂದ ಭಾರಿ ಹಿಮಪಾತದ ನಂತರ 12 ಜಿಲ್ಲೆಗಳಿಗೆ ಹಿಮಪಾತದ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ಪತನಕ್ಕೂ ಮುನ್ನ ಯುಪಿ ಯುವಕನಿಂದ ಫೇಸ್‌ಬುಕ್‌ ಲೈವ್‌: ಭಯಾನಕ ದೃಶ್ಯ ಸೆರೆ

ABOUT THE AUTHOR

...view details