ಸಿಧಿ, ಮಧ್ಯಪ್ರದೇಶ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೊಹಾನಿಯಾ ಸುರಂಗದ ಬಳಿ ಟ್ರಕ್ವೊಂದು ನಿಂತಿದ್ದ ಬಸ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ, 14 ಜನರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೃಹ ಸಚಿವ ಅಮಿತ್ ಶಾ ಅವರ ರ್‍ಯಾಲಿಗೆ ತೆರಳಿದ್ದ ಬಸ್ ವಾಪಸ್ ಆಗುತ್ತಿದ್ದವು. ಈ ವೇಳೆ, ಬಸ್ ಚಾಲಕರು ಸುರಂಗ ಮಾರ್ಗದ ಬಳಿ ಬಸ್ಗಳನ್ನು ನಿಲ್ಲಿಸಿದ್ದಾರೆ. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ವೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬಸ್ವೊಂದು ಪಲ್ಟಿಯಾಗಿದ್ದು, ಉಳಿದ ಬಸ್ಗಳಿಗೆ ಡಿಕ್ಕಿ ರಭಸಕ್ಕೆ ಜಖಂಗೊಂಡಿದ್ದವು. ಈ ಭೀಕರ ಅಪಘಾತದಲ್ಲಿ 14 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ?: ಸತ್ನಾ ಜಿಲ್ಲೆಯಲ್ಲಿ ಆಯೋಜಿಸಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನೇಕ ಪ್ರಯಾಣಿಕರನ್ನು ನೇರವಾಗಿ ಸಿಧಿ ಜಿಲ್ಲೆಗೆ ತೆರಳಿದ್ದರು. ನಂತರ ಪ್ರಯಾಣಿಕರನ್ನು ಹೊತ್ತ ಬಸ್‌ಗಳು ಕಾರ್ಯಕ್ರಮ ಮುಗಿದ ನಂತರ ಸತ್ನಾದಿಂದ ಪ್ರಯಾಣಿಕರ ಸ್ವಗ್ರಾಮದತ್ತ ಪ್ರಯಾಣ ಬೆಳಸಿದ್ದವರು. ಬಸ್ ನೇರವಾಗಿ ರೇವಾ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಸಿಧಿ ಜಿಲ್ಲೆಯ ಮೊಹಾನಿಯಾ ಸುರಂಗವನ್ನು ದಾಟಿತ್ತು.
ಸುರಂಗ ದಾಟಿದ ತಕ್ಷಣ ಬಸ್ಸುಗಳನ್ನು ಡ್ರೈವರ್ಗಳು ಅನನ್ಯ ಕಾರಣದಿಂದಾಗಿ ನಿಲ್ಲಿಸಿದ್ದರು. ಇದೇ ವೇಳೆ, ರೇವಾ ಕಡೆಯಿಂದ ಬರುತ್ತಿದ್ದ ಟ್ರಕ್ ಬರುತ್ತಿತ್ತು. ಬಸ್ ಬಳಿ ಬರುತ್ತಿದ್ದಂತೆ ಟ್ರಕ್ನ ಟೈರ್ ಒಡೆದಿದ್ದು, ವಾಹನದ ನಿಯಂತ್ರಣ ತಪ್ಪಿ ಸುರಂಗ ಮಾರ್ಗದ ಬಳಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್‌ಗೆ ಡಿಕ್ಕಿಯಾದ ರಭಸಕ್ಕೆ ಅಲ್ಲಿ ನಿಂತಿದ್ದ ಮೂರು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.