ಕರ್ನಾಟಕ

karnataka

ETV Bharat / bharat

ಘಾಘ್ರಾ ನದಿಯಲ್ಲಿ ಮುಳುಗಿದ ದೋಣಿ.. 15 ಮಂದಿ ದುರ್ಮರಣ?

ಲಭ್ಯವಾಗಿರುವ ಮಾಹಿತಿ ಪ್ರಕಾರ 18 ಜನರು ದೋಣಿಯಲ್ಲಿ ತೆರಳಿದ್ದರು ಎನ್ನಲಾಗಿದ್ದು, ಅದರಲ್ಲಿ ಮೂವರು ಈಜಿ ದಡ ಸೇರಿದ್ದು, 15 ಜನರು ನಾಪತ್ತೆಯಾಗಿದ್ದಾರೆ.

ghaghra river
ghaghra river

By

Published : Oct 20, 2021, 6:36 PM IST

ಲಖಿಂಪುರಿ ಖೇರಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖಿಂಪುರಿ ಖೇರಿ ಜಿಲ್ಲೆಯ ಮಿರ್ಜಾಪುರ್ ಗ್ರಾಮದ ಘಾಘ್ರಾ ನದಿಯಲ್ಲಿ ದೋಣಿ ಮುಳುಗಿರುವ ಪರಿಣಾಮ 15 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 18 ಜನರು ದೋಣಿಯಲ್ಲಿ ಜಮೀನುಗಳಿಗೆ ಇವರೆಲ್ಲರೂ ತೆರಳುತ್ತಿದ್ದ ವೇಳೆ ಏಕಾಏಕಿ ಪ್ರವಾಹ ಹೆಚ್ಚಾದ ಕಾರಣ ಈ ಅವಘಡ ಸಂಭವಿಸಿದೆ. ಈಗಾಗಲೇ ಮೂವರು ಈಜಿ ದಡ ಸೇರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿರುವ ಯೋಗಿ ಆದಿತ್ಯನಾಥ್​, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ನಾಪತ್ತೆಯಾಗಿರುವ ವ್ಯಕ್ತಿಗಳಿಗೋಸ್ಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಇದನ್ನೂ ಓದಿರಿ:ಕೆರೆಗೆ ಉರುಳಿಬಿದ್ದ ಶಾಲಾ ವಿದ್ಯಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್​: ಓರ್ವ ಸಾವು, ಕೆಲವರಿಗೆ ಗಾಯ

ಘಟನಾ ಸ್ಥಳದಲ್ಲಿ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.

ABOUT THE AUTHOR

...view details