ನವದೆಹಲಿ:ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದಾಗಿ ಮೃತರ ಸಂಖ್ಯೆ 140ಕ್ಕೆ ಏರಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದ ಹಲವು ಮನೆಗಳು ಧರಾಶಾಹಿಯಾಗಿವೆ. ರುಕುಮ್ ಪಶ್ಚಿಮದಲ್ಲಿ 35 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರೆ, ಜಾಜರ್ಕೋಟ್ ಜಿಲ್ಲೆಯಲ್ಲಿ 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನೇಪಾಳದ ಅಧಿಕಾರಿಗಳು ದೃಢಪಡಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕನಿಷ್ಠ 140 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ-ನೇಪಾಳ ಗಡಿಯಲ್ಲಿರುವ ಕತಿಹಾರ್, ಮೋತಿಹಾರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ.
ಉತ್ತರಭಾರತದಲ್ಲಿ ನಡುಗಿದ ಭೂಮಿ:ದೆಹಲಿ-ಎನ್‌ಸಿಆರ್, ಯುಪಿ, ಬಿಹಾರ, ಉತ್ತರಾಖಂಡ ಮತ್ತು ಹರಿಯಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭೂಕಂಪನದಿಂದಾಗಿ ಭೂಮಿ ನಡುಗಿದೆ. ಇದರ ತೀವ್ರತೆ ಹೆಚ್ಚಿದ್ದು, ಜನರು ಭಯಭೀತರಾಗಿದ್ದಾರೆ. ಈ ದಿಢೀರ್ ಭೂಕಂಪದಿಂದಾಗಿ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಹೈ ರೈಸ್ ಸೊಸೈಟಿಯ ಅಸೆಂಬ್ಲಿ ಪ್ರದೇಶದಲ್ಲೂ ಜನರು ಆತಂಕಕ್ಕೊಳಾಗಿರುವುದು ಕಂಡು ಬಂದಿದೆ.
ವಿಡಿಯೋ ವೈರಲ್: ರಾತ್ರಿ 11.32ರ ವೇಳೆಗೆ ಭೂಕಂಪನದ ಅನುಭವವಾಗಿದೆ. ಜನರು ಊಟ ಮಾಡಿ ಮಲಗಲು ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ ಜನರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಬಳಿಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯ ಮತ್ತು ರಸ್ತೆ ದೀಪಗಳು ಹಾಗೂ ಸೀಲಿಂಗ್ ಫ್ಯಾನ್ ಅಲುಗಾಡುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಓದಿ:ಜಮ್ಮು ಕಾಶ್ಮೀರದ ಕಿಶ್ತ್ವಾರ್, ಮ್ಯಾನ್ಮಾರ್ನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ನೇಪಾಳದಲ್ಲಿ 128 ಜನ ಸಾವು:ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದಾಗಿ ಇಲ್ಲಿಯವರೆಗೆ 128 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದಿಂದ ಹಲವು ಮನೆಗಳು ಹಾನಿಗೀಡಾಗಿವೆ. ರುಕುಮ್ ವೆಸ್ಟ್‌ನಲ್ಲಿ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಜರ್ಕೋಟ್ ಜಿಲ್ಲೆಯಲ್ಲಿ ಈವರೆಗೆ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭೂಕಂಪದ ನಂತರ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ನೇಪಾಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
40 ಸೆಕೆಂಡುಗಳ ಕಾಲ ನಡುಗಿದ ಭೂಮಿ: ನೇಪಾಳದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ, ಭೂಕಂಪವು ರಾತ್ರಿ 11.47 ಕ್ಕೆ ಅಪ್ಪಳಿಸಿತು, ಅದರ ಕೇಂದ್ರಬಿಂದುವು ಜಜರ್ಕೋಟ್‌ನ ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿದೆ ಕಂಡು ಬಂದಿದೆ. ಭೂಕಂಪನದ ಪ್ರಭಾವ ಭಾರತ ಮತ್ತು ಚೀನಾದಲ್ಲಿಯೂ ಕಂಡುಬಂದಿದೆ. ಭಾರತದಲ್ಲೂ ಸುಮಾರು 20 ರಿಂದ 40 ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ತಿಳಿಸಿದ್ದಾರೆ.
ಭಯಭೀತರಾದ ಕಠ್ಮಂಡುವಿನ ಜನರು:ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಬಲ ಭೂಕಂಪದ ತತ್ತರಿಸಿ ಹೋಗಿದೆ. ಜಜರ್ಕೋಟ್ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿದೆ. ಭೂಕಂಪನದ ಅನುಭವವಾದ ತಕ್ಷಣ ಕಠ್ಮಂಡುವಿನ ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಈ ವೇಳೆ ರಸ್ತೆಗಳಲ್ಲಿ ಜನರು ಭಯಭೀತರಾಗಿ ನಿಂತಿರುವುದು ಕಂಡು ಬಂತು.
ಪ್ರಾಣಹಾನಿಗೆ ಪ್ರಧಾನಿ ಸಂತಾಪ: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಭೂಕಂಪದಿಂದ ಜೀವ ಮತ್ತು ಆಸ್ತಿ ನಷ್ಟಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಜಜರ್‌ಕೋಟ್‌ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪದಿಂದ ಜೀವ ಮತ್ತು ಆಸ್ತಿಪಾಸ್ತಿ ಹಾನಿಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಎಂದು ನೇಪಾಳದ ಪಿಎಂಒ ಟ್ವೀಟ್ ಮಾಡಿದೆ. ಗಾಯಗೊಂಡವರ ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ ಮೂರು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.
ಅಕ್ಟೋಬರ್ನಲ್ಲೂ ಸಂಭವಿಸಿತ್ತು ಪ್ರಬಲ ಭೂಕಂಪ:ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಕಳೆದ ಅಕ್ಟೋಬರ್ 22ರಂದು 6.1 ತೀವ್ರತೆಯಲ್ಲಿ ಪ್ರಬಲ ಭೂಕಂಪದ ಅನುಭವವಾಗಿತ್ತು. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ಧಾಡಿಂಗ್ ಜಿಲ್ಲೆಯಲ್ಲಿ ಭೂಕಂಪನವು ಬೆಳಗ್ಗೆ 7.39ಕ್ಕೆ ದಾಖಲಾಗಿದೆ. ಕಂಪನದಿಂದ ಯಾವುದೇ ಸಾವು-ನೋವು, ಪ್ರಾಣಹಾನಿ ಸಂಭವಿಸಿಲ್ಲ. ಧಾಡಿಂಗ್ ಮಾತ್ರವಲ್ಲದೇ, ಬಾಗೃತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರೆ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿದೆ ಎಂದು ಮಾಹಿತಿ ನೀಡಿತ್ತು.(ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ.. ನಲುಗಿದ ಕಠ್ಮಂಡು)
2015 ರಲ್ಲಿ ಭೂಕಂಪದಿಂದ ಸಾವಿರಾರೂ ಜನ ಸಾವು: ಹಿಮಾಲಯದ ನೇಪಾಳದಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ. 2015 ರಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪವು ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು, ಸುಮಾರು 9 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಮನೆಗಳು ಹಾಳಾಗಿದ್ದವು.