ಕರ್ನಾಟಕ

karnataka

ETV Bharat / bharat

ಜಾರ್ಜ್​ ಫರ್ನಾಂಡಿಸ್​, ಅನಿಲ್​ ಹೆಗ್ಡೆಯಿಂದ ಹಿಡಿದು ಗುಜ್ರಾಲ್​​​​​​​​​​ ತನಕ ಬಿಹಾರವೇ ರಾಜಕೀಯ ಆಶ್ರಯ ತಾಣ! - ಈಗ ಕರ್ನಾಟಕದ ಅನಿಲ್​ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಸ್ಪರ್ಧೆ

ದೇಶದ ಅನೇಕ ಹಿರಿಯ ನಾಯಕರು ಬಿಹಾರದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಆಯ್ಕೆ ಆಗಿ ಬಿಹಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕರ್ನಾಟಕದ ಜಾರ್ಜ್ ಫರ್ನಾಂಡಿಸ್ ಮತ್ತು ಮಧ್ಯಪ್ರದೇಶದ ಶರದ್ ಯಾದವ್ ಅವರು ಬಿಹಾರದಿಂದ ಹಲವಾರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಷ್ಟ್ರೀಯ ನಾಯಕರಾಗಿ ಮಿಂಚಿದ್ದಾರೆ.

many Leaders other states went  to Lok Sabha and Rajya Sabha from Bihar
ಜಾರ್ಜ್​ ಫರ್ನಾಂಡಿಸ್​, ಅನಿಲ್​ ಹೆಗ್ಡೆಯಿಂದ ಹಿಡಿದು ಗುಜ್ರಾಲ್​​​​​​​​​​ ತನಕ ಬಿಹಾರವೇ ರಾಜಕೀಯ ಆಶ್ರಯ ತಾಣ!

By

Published : May 21, 2022, 9:05 PM IST

ಪಾಟ್ನಾ(ಬಿಹಾರ): 2022ರ ರಾಜ್ಯಸಭಾ ಉಪಚುನಾವಣೆಯಲ್ಲಿ ಜೆಡಿಯು ತನ್ನ ಅಭ್ಯರ್ಥಿಯಾಗಿ ಕರ್ನಾಟಕದ ಅನಿಲ್ ಹೆಗ್ಡೆ ಅವರನ್ನು ನಾಮನಿರ್ದೇಶನ ಮಾಡಿದೆ. ಅವರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅನಿಲ್ ಹೆಗ್ಡೆ ಸಾಮಾನ್ಯ ಜೆಡಿಯು ಕಾರ್ಯಕರ್ತರಾಗಿದ್ದಾರೆ.

ಬಿಹಾರದಲ್ಲಿ ಜೆಡಿಯು ಬೆಳೆಸಿ ಮಿಂಚಿದ ಕರ್ನಾಟಕದ ಜಾರ್ಜ್​ ಫರ್ನಂಡಿಸ್​:ಆದರೆ, ದೇಶದ ಅನೇಕ ಹಿರಿಯ ನಾಯಕರು ಬಿಹಾರದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಆಯ್ಕೆ ಆಗಿ ಬಿಹಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕರ್ನಾಟಕದ ಜಾರ್ಜ್ ಫರ್ನಾಂಡಿಸ್ ಮತ್ತು ಮಧ್ಯಪ್ರದೇಶದ ಶರದ್ ಯಾದವ್ ಅವರು ಬಿಹಾರದಿಂದ ಹಲವಾರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಷ್ಟ್ರೀಯ ನಾಯಕರಾಗಿ ಮಿಂಚಿದ್ದಾರೆ.

ಇನ್ನು ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಿಹಾರದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ರಾಷ್ಟ್ರರಾಜಕಾರಣದಲ್ಲಿ ಮಿಂಚಿದ್ದಾರೆ. ಇವರಷ್ಟೇ ಅಲ್ಲ, ಬಿಹಾರದಿಂದ ಲೋಕಸಭೆ ಮತ್ತು ರಾಜ್ಯಸಭೆಗೆ ಹೋಗುವ ಇತರ ರಾಜ್ಯಗಳ ನಾಯಕರ ದೊಡ್ಡ ಪಟ್ಟಿಯೇ ಇದೆ.

ಇವರೆಲ್ಲ ಬಿಹಾರದಿಂದಲೇ ರಾಜಕೀಯ ಉನ್ನತಿ ಪಡೆದವರು:ಈ ಹಿಂದೆ ಸರೋಜಿನಿ ನಾಯ್ಡು, ಜೆಬಿ ಕೃಪ್ಲಾನಿ, ಚಂದ್ರಶೇಖರ್, ಶರದ್ ಯಾದವ್, ಕಪಿಲ್ ಸಿಬಲ್, ಪ್ರೇಮ್ ಚಂದ್ರ ಗುಪ್ತಾ, ಪವನ್ ವರ್ಮಾ, ಕೆಸಿ ತ್ಯಾಗಿ, ರಾಮ್ ಜೇಠ್ಮಲಾನಿ, ಧರ್ಮೇಂದ್ರ ಪ್ರಧಾನ್ ಮತ್ತು ಹರಿವಂಶ್ ಸೇರಿದಂತೆ ದೊಡ್ಡ ದೊಡ್ಡ ನಾಯಕರ ಪಟ್ಟಿಯೇ ಇದೆ. ಇದರಲ್ಲಿ ಕೆಲವರು ರಾಜಕೀಯದಲ್ಲಿ ತಮ್ಮದೇ ಛಾಪೊತ್ತಿ ಮರೆಯಾಗಿದ್ದರೆ. ಹಲವರು ಈಗಲೂ ಬಿಹಾರವನ್ನೇ ಪ್ರತಿನಿಧಿಸುತ್ತಿದ್ದಾರೆ.

ಬಿಹಾರದಲ್ಲಿ ಜಾರ್ಜ್​ ಹವಾ: ಜಾರ್ಜ್ ಫರ್ನಾಂಡಿಸ್ ಅವರು ಬಿಹಾರದಿಂದ 7 ಬಾರಿ ಮತ್ತು ಶರದ್ ಯಾದವ್ ನಾಲ್ಕು ಬಾರಿ ಸಂಸದರಾಗಿದ್ದರು. ಆ ನಂತರ ರಾಜ್ಯಸಭೆ ಸದಸ್ಯರಾಗಿ ಬಿಹಾರದಿಂದಲೇ ಆಯ್ಕೆ ಆಗಿದ್ದುಂಟು. ಮಧು ಲಿಮಯೇ ಬಂಕಾ ಮತ್ತು ಮುಂಗೇರ್‌ನಿಂದ ನಾಲ್ಕು ಬಾರಿ ಸಂಸದರಾಗಿದ್ದರು. ಅಂತೆಯೇ, ಚಂದ್ರಶೇಖರ್ ಅವರು ಮಹಾರಾಜ್‌ಗಂಜ್‌ನಿಂದ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದರು.

ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಿಹಾರದಿಂದ ಆಯ್ಕೆಯಾದ ನಾಯಕರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಸರೋಜಿನಿ ನಾಯ್ಡು ಅವರಿಂದ ಹಿಡಿದು ಅನಿಲ್ ಹೆಗಡೆಯವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿಗಳೇ ಇದ್ದಾರೆ.

ಸಮಾಜವಾದಿಗಳ ನಾಡು ಬಿಹಾರ:ಬಿಹಾರ ಸಮಾಜವಾದಿಗಳ ನಾಡು. ಇದು ಮಹಾತ್ಮಾ ಗಾಂಧಿಯವರ ಕರ್ಮಭೂಮಿ, ಜೈಪ್ರಕಾಶ್ ನಾರಾಯಣರ ನಾಡು. ಬಿಹಾರದ ಜನರು ಸಮಾಜವಾದಿ ಧಾರೆಯ ನಾಯಕರನ್ನು ಇಷ್ಟಪಡುತ್ತಾರೆ ಮತ್ತು ಆ ನಾಯಕರೂ ಬಿಹಾರವನ್ನು ಇಷ್ಟಪಟ್ಟಿದ್ದರು. ಅದಕ್ಕಾಗಿಯೇ ಇತರ ರಾಜ್ಯಗಳ ನಾಯಕರು ಬಿಹಾರದವರಲ್ಲದಿದ್ದರೂ ಬಿಹಾರವನ್ನು ಪ್ರತಿನಿಧಿಸಿದ್ದಾರೆ.

ಈಗ ಕರ್ನಾಟಕದ ಅನಿಲ್​ ಹೆಗ್ಡೆ ರಾಜ್ಯಸಭೆಗೆ ಸ್ಪರ್ಧೆ:ಬಿಹಾರ ಅವರಿಗೆ ಪ್ರೀತಿಯನ್ನೂ ನೀಡಿದೆ. ಜಾರ್ಜ್ ಫರ್ನಾಂಡಿಸ್ ಬಿಹಾರದವರಲ್ಲ. ಆದರೆ ಮುಜಾಫರ್‌ಪುರ ಸೇರಿದಂತೆ ಹಲವೆಡೆ ಸಂಸದರಾಗಿ ಆಯ್ಕೆಯಾಗಿದ್ದರು. ಶರದ್ ಯಾದವ್ ಮಧ್ಯಪ್ರದೇಶಕ್ಕೆ ಸೇರಿದವರಾಗಿದ್ದರೂ ಹಲವು ಬಾರಿ ಸಂಸದರಾಗಿದ್ದರು. ಮಧು ಲಿಮಯೆ ಅವರು ಬಂಕಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆದ್ದರಿಂದ ಬಿಹಾರದಲ್ಲಿ ನೆಲೆಸಿದ ಅನೇಕ ಸಮಾಜವಾದಿ ನಾಯಕರು ಬಿಹಾರವನ್ನು ಇಷ್ಟಪಟ್ಟಿದ್ದಾರೆ.

ಅನಿಲ್ ಹೆಗ್ಡೆ ಅವರನ್ನು ಈಗ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ, ಅವರು ಬಿಹಾರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಯು ವಕ್ತಾರ ಪ್ರಗತಿ ಮೆಹ್ತಾ ಹೇಳಿದ್ದಾರೆ.

ಇದರಲ್ಲೇನು ವಿಶೇಷ ಇಲ್ಲ ಅಂತಾರೆ ರಾಜಕೀಯ ವಿಶ್ಲೇಷಕರು:ಬಿಜೆಪಿ ವಕ್ತಾರ ವಿನೋದ್ ಶರ್ಮಾ ಮಾತನಾಡಿ, ಅನಿಲ್ ಹೆಗಡೆ ಅವರನ್ನು ಕಳುಹಿಸಲು ಜೆಡಿಯು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆಯೂ ಬಿಹಾರದಿಂದ ಸಾಕಷ್ಟು ಮಂದಿ ಹೊರ ರಾಜ್ಯದವರು ಆಯ್ಕೆ ಆಗಿ ಹೋಗಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಅದು ಒಳ್ಳೆಯದು ಎಂದಿದ್ದಾರೆ.

ಇನ್ನು, ಬೇರೆ ರಾಜ್ಯಗಳ ಜನರನ್ನು ಇಲ್ಲಿಂದ ರಾಜ್ಯಸಭೆಗೆ ಕಳುಹಿಸುವುದು ಸಂಪ್ರದಾಯ. ದೊಡ್ಡವರು ಇಲ್ಲಿಂದ ರಾಜ್ಯಸಭೆಗೆ ಆಯ್ಕೆ ಆಗಿ ಹೋಗಿದ್ದಾರೆ. ಇದಕ್ಕೆ ದೊಡ್ಡ ಕಾರಣವೇನೂ ಇಲ್ಲ. ಪಕ್ಷದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಬೇರೆ ರಾಜ್ಯಗಳಿಂದಲೂ ಪ್ರತಿಷ್ಠಿತ ನಾಯಕರನ್ನು ರಾಜ್ಯಸಭೆಗೆ ಕಳುಹಿಸುವ ಸಂಪ್ರದಾಯವಿದೆ. ಮನಮೋಹನ್ ಸಿಂಗ್ ಕೂಡ ಅಸ್ಸೋಂನಿಂದ ರಾಜ್ಯಸಭೆಗೆ ಆಯ್ಕೆ ಆಗಿ ಹೋಗಿದ್ದಾರೆ ಅಂತಾರೆ ರಾಜಕೀಯ ವಿಶ್ಲೇಷಕ ಅಜಯ್ ಝಾ.

ಪ್ರಧಾನಿ ಸಹ ಬೇರೆ ರಾಜ್ಯದಿಂದಲೇ ಆಯ್ಕೆಯಾಗಿದ್ದಾರೆ: ಪ್ರಧಾನಿ ನರೇಂದ್ರ ಮೋದಿ ಕೂಡ ಬೇರೆ ರಾಜ್ಯದಿಂದ ಲೋಕಸಭೆಯ ಸದಸ್ಯರಾಗಿದ್ದಾರೆ. ಪ್ರಧಾನಿ ಮೋದಿಯವರು ಗುಜರಾತ್‌ನವರು, ಆದರೆ ಉತ್ತರ ಪ್ರದೇಶದ ಬನಾರಸ್ ಸಂಸದೀಯ ಕ್ಷೇತ್ರದ ಸಂಸದರಾಗಿದ್ದಾರೆ. ಸಮಾಜವಾದಿಗಳ ಬಗ್ಗೆ ಮಾತನಾಡುವಾಗಲೆಲ್ಲಾ ಬಿಹಾರದ ಪ್ರೀತಿ ಯಾವಾಗಲೂ ಗೋಚರಿಸುತ್ತದೆ. ಈಗ ಜೆಡಿಯು ತನ್ನ ಸಮಾಜವಾದಿ ಕಾರ್ಯಕರ್ತ ಅನಿಲ್ ಹೆಗ್ಡೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸುವ ಮೂಲಕ ಸಂಪ್ರದಾಯ ಮುಂದುವರೆಸಿದೆ.

ಜಾರ್ಜ್​ ಫರ್ನಾಂಡಿಸ್​, ಅನಿಲ್​ ಹೆಗ್ಡೆಯಿಂದ ಹಿಡಿದು ಗುಜ್ರಾಲ್​​​​​​​​​​ ತನಕ ಬಿಹಾರವೇ ರಾಜಕೀಯ ಆಶ್ರಯ ತಾಣ!

ಹೆಗ್ಡೆ ಪಕ್ಷದ ಹಳೇ ಕಾರ್ಯಕರ್ತ: ಜೆಡಿಯುನಲ್ಲಿ ಅನಿಲ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಜೆಡಿಯು ಮತ್ತು ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಬಹಳ ಹಿಂದಿನಿಂದಲೂ ಸಂಪರ್ಕ ಹೊಂದಿದ್ದಾರೆ. ಈ ಹಿಂದೆ ಕೆಸಿ ತ್ಯಾಗಿ ಸೇರಿದಂತೆ ಹಲವು ಹೆಸರುಗಳು ಪಕ್ಷದ ಒಳಗೆ ಮತ್ತು ಹೊರಗೆ ಚರ್ಚೆಯಾಗುತ್ತಿದ್ದವು. ದೊರೆ ಮಹೇಂದ್ರ ಕುಟುಂಬದ ಸದಸ್ಯ ಭೋಲಾ ಶರ್ಮಾ ಹೆಸರೂ ಚರ್ಚೆಯಲ್ಲಿತ್ತು. ಆದರೆ ಸಿಎಂ ನಿತೀಶ್ ಕುಮಾರ್ ಅವರು ಪಕ್ಷದ ಹಳೆಯ ಮತ್ತು ಪಕ್ಷದ ಕಟ್ಟಾ ಕಾರ್ಯಕರ್ತ ಅನಿಲ್ ಹೆಗ್ಡೆ ಹೆಸರನ್ನು ಆಯ್ಕೆ ಮಾಡಿ ಅಂತಿಮಗೊಳಿಸಿದ್ದಾರೆ. ಅವರ ವಿರುದ್ಧ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಇರುವುದರಿಂದ ಅವರ ಆಯ್ಕೆ ಬಹುತೇಕ ಖಚಿತ.

ಯಾರಿವರು ಹೆಗ್ಡೆ: ಜಾರ್ಜ್ ಫರ್ನಾಂಡಿಸ್ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅನಿಲ್ ಹೆಗ್ಡೆ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿಯೂ ಆಗಿದ್ದಾರೆ. ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಯನ್ನು ಅವರೇ ನಡೆಸಿದ್ದರು. ಅವರು ಕಳೆದ 38 ವರ್ಷಗಳಿಂದ ಜೆಡಿಯುಗಾಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಅವರು ಯಾವುದೇ ನಾಯಕರಿಂದ ಹುದ್ದೆಯನ್ನು ಕೇಳಲಿಲ್ಲ. ಹಾಗೆಯೇ ಅವರು ಯಾವುದೇ ಸ್ಥಾನಕ್ಕಾಗಿ ಲಾಬಿ ಕೂಡಾ ಮಾಡಿಲ್ಲ. ಅವರ ಪರಿಶ್ರಮವನ್ನು ಕಂಡ ನಿತೀಶ್ ಕುಮಾರ್​, ಈ ಬಾರಿ ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಇದನ್ನು ಓದಿ:ರೈತರಿಗೆ ಬಂಪರ್​​: ರಸಗೊಬ್ಬರಕ್ಕೆ 1.10 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ, ಸಿಮೆಂಟ್ ದರ ಇಳಿಸಲು ನಿರ್ಧಾರ

ABOUT THE AUTHOR

...view details