ನಾಗ್ಪುರ(ಮಹಾರಾಷ್ಟ್ರ):ಹೆರಿಗೆ ಸಮಯದಲ್ಲಿ ಕೋವಿಡ್ ಸೋಂಕಿತ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಆಕೆ ಹೆತ್ತ ಮಗು ಹಾಲಿಗಾಗಿ ಹಸಿವಿನಿಂದ ಕಂಗೆಟ್ಟು ಅಳುತ್ತಿತ್ತು. ಆ ದೃಶ್ಯ ನೊಡಲಾಗದೆ ಅಲ್ಲಿದ್ದ ಹಲವಾರು ತಾಯಂದಿರು ಹಸುಳೆಗೆ ಎದೆಹಾಲು ನೀಡಲು ಮುಂದೆ ಬಂದರು. ಈ ಅಪರೂಪದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಿತು.
ನಾಗ್ಪುರದ ಮೀನಲ್ ವರ್ನೇಕರ್ ಅವರಿಗೆ ಥಾಣೆಯ ಚೇತನ್ ಎಂಬವರ ಜೊತೆ ವಿವಾಹವಾಗಿತ್ತು. ವಿವಾಹದ ಬಳಿಕ ಸತಿ-ಪತಿ ಇಬ್ಬರೂ ಥಾಣೆಯಲ್ಲಿಯೇ ವಾಸಿಸುತ್ತಿದ್ದರು. ಈ ನಡುವೆ ಗರ್ಭವತಿಯಾದ ಮೀನಲ್ ತನ್ನ ತಾಯಿ ಮನೆಗೆ ಬಂದಿದ್ದಾರೆ. ಆದ್ರೆ ಆಕೆ 8 ತಿಂಗಳ ಗರ್ಭಿಣಿಯಾಗಿರುವಾಗಲೇ ಆಕೆಗೆ ಕೊರೊನಾ ಸೋಂಕಿತ್ತು. ತಕ್ಷಣವೇ ಆಕೆಯನ್ನು ಪೋಷಕರು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.