ಸೇಲಂ(ತಮಿಳುನಾಡು):ತಮಿಳುನಾಡಿನ ಸೇಲಂನಲ್ಲಿ ಎರಡು ಖಾಸಗಿ ಬಸ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಘಟನೆಯ ವಿಡಿಯೋ ಬಸ್ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಕೆಲ ವಿದ್ಯಾರ್ಥಿಗಳು ಸೇರಿದಂತೆ 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
CCTV Video: ಸೇಲಂನಲ್ಲಿ ಎರಡು ಬಸ್ಗಳ ಮಧ್ಯೆ ಭೀಕರ ಅಪಘಾತ - ಸೇಲಂನಲ್ಲಿ ಬಸ್ಗಳ ಮಧ್ಯೆ ಅಪಘಾತ
ಖಾಸಗಿ ಬಸ್ಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
BUS ACCIDENT IN SALEM TAMILNADU
ಎಡಪ್ಪಾಯಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ವೊಂದು ತಿರುಚೆಂಗೋಡಿನಿಂದ ಬರುತ್ತಿದ್ದ ಇನ್ನೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಸೇಲಂ ಮತ್ತು ಎಡಪ್ಪಾಡಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭೀಕರ ಅಪಘಾತದ ರಭಸಕ್ಕೆ ಒಂದು ಬಸ್ನ ಚಾಲಕ ಸೇರಿದಂತೆ ಅನೇಕ ಪ್ರಯಾಣಿಕರು ತೂರಿಕೊಂಡು ಹೊರಬಿದ್ದಿದ್ದಾರೆ.
ಭೀಕರ ಅಪಘಾತದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
Last Updated : May 18, 2022, 3:20 PM IST