ಕೊಲ್ಲಾಪುರ (ಮಹಾರಾಷ್ಟ್ರ) :ರೊಚ್ಚಿಗೆದ್ದ ಹಸುವೊಂದು ದಾರಿಯಲ್ಲಿ ಕಂಡ ಕಂಡವರ ಮೇಲೆ ದಾಳಿ ನಡೆಸಿದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ ನಡೆದಿದೆ.
ಕೊಲ್ಲಾಪುರದ ರಾಜಾರಾಂಪುರಿ ಪ್ರದೇಶದ ಶಾಹುನಗರದಲ್ಲಿ ಮಹಿಳೆಯೊಬ್ಬರು ಮನೆ ಬಾಗಿಲಿನ ಮುಂದೆ (ರಸ್ತೆ ಬದಿ) ಪಾತ್ರೆಗಳನ್ನು ತೊಳೆಯುತ್ತಿದ್ದ ವೇಳೆ ಹಸು ಬಂದು ಗುದ್ದಿದೆ. ಈಕೆಯನ್ನು ಬಿಡಿಸಲು ಬಂದ ಇನ್ನೊಬ್ಬ ಮಹಿಳೆ ಮೇಲೂ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.