ಕರ್ನಾಟಕ

karnataka

By

Published : May 22, 2022, 12:34 PM IST

Updated : May 22, 2022, 2:26 PM IST

ETV Bharat / bharat

ರಸ್ತೆ ಬದಿ ನಿಂತಿದ್ದ ಟ್ರಕ್​​ಗೆ ಬುಲೆರೋ ಡಿಕ್ಕಿ: ಮದುವೆ ಸಮಾರಂಭದಿಂದ ಬರುತ್ತಿದ್ದ 9 ಜನರ ದಾರುಣ ಸಾವು

ಮದುವೆ ಸಮಾರಂಭವೊಂದಲ್ಲಿ ಭಾಗವಹಿಸಿ ರಾತ್ರಿ ಮರಳಿ ಬರುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್​ಗೆ ಬುಲೆರೋ ಡಿಕ್ಕಿ ಹೊಡೆದು ಒಂಭತ್ತು ಜನರು ಮೃತಪಟ್ಟಿದ್ದಾರೆ. ಚಾಲಕ ನಿದ್ರೆ ಮಂಪರಿನಲ್ಲಿ ರಸ್ತೆ ಟ್ರಕ್​ಗೆ​​ ಗುದ್ದಿದ್ದಾನೆ ಎನ್ನಲಾಗಿದೆ..

Nine persons killed in road accident in UP
ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ

ಸಿದ್ಧಾರ್ಥನಗರ (ಉತ್ತರ ಪ್ರದೇಶ) :ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಸ ಸಾಗಿಸುವ ಟ್ರಕ್​​ಗೆ ಬುಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇತರ ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ನೌಘರ್-ಬನ್ಸಿ ರಸ್ತೆಯಲ್ಲಿರುವ ಕಟ್ಯಾ ಗ್ರಾಮದ ಬಳಿ ಈ ದುರಂತ ನಡೆದಿದೆ. ಮೃತರು ಮಹ್ಲಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದಲ್ಲಿ ಭಾಗವಹಿಸಿ ರಾತ್ರಿ ಮರಳಿ ಬರುತ್ತಿದ್ದರು. ಈ ವೇಳೆ ಬುಲೆರೋ ಚಾಲಕ ನಿದ್ರೆ ಮಂಪರಿನಲ್ಲಿ ರಸ್ತೆ ನಿಲ್ಲಿಸಿದ್ದ ಟ್ರಕ್​ಗೆ​​ ಗುದ್ದಿದ್ದಾನೆ ಎಂದು ತಿಳಿದು ಬಂದಿದೆ.

ಈ ಅಪಘಾತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತಯೇ ಸ್ಥಳಾಗಮಿಸಿದ ಪೊಲೀಸರು ಮೂವರು ಗಾಯಾಳುಗಳನ್ನು ಗೋರಖ್​ಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದಾರೆ.

ಪ್ರಧಾನಿ-ಸಿಎಂ ಸಂತಾಪ : ಈ ಘಟನೆಯಲ್ಲಿ ಮೃತಪಟ್ಟ ಒಂಬತ್ತು ಜನರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ಧಾರೆ. ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವು ದುಃಖಕರವಾಗಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ.

ಅವರಿಗೆ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ಕರುಣಿಸಲಿ ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್​ ಮಾಡಿದೆ. ಇತ್ತ, ಸಿಎಂ ಯೋಗಿ ಕೂಡ ಈ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

2 ಲಕ್ಷ ರೂ. ಪರಿಹಾರ :ಅಲ್ಲದೇ, ಮೃತರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯವು ಪರಿಹಾರ ಘೋಷಿಸಿದೆ. ರಾಷ್ಟ್ರೀಯ ವಿಪತ್ತು ನಿಧಿಯಡಿ ಮೃತರಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ:ಗೋವಾದಲ್ಲಿ ಭೀಕರ ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ

Last Updated : May 22, 2022, 2:26 PM IST

ABOUT THE AUTHOR

...view details