ಕರ್ನಾಟಕ

karnataka

ETV Bharat / bharat

ಗಂಗಾ ನದಿ ತಟದ ಮರಳಲ್ಲೇ 300 ಮೃತದೇಹಗಳ ಸಮಾಧಿ!

ಉತ್ತರ ಪ್ರದೇಶದ ಬಕ್ಸಾರ್ ಮತ್ತು ರೌತಾಪುರದ ಎರಡು ಘಾಟ್​ನ ಮರಳಿನ ರಾಶಿಯಲ್ಲಿ ಹೆಣಗಳನ್ನು ಹೂತು ಹಾಕುತ್ತಿರುವ ದೃಶ್ಯ ಕಂಡುಬಂದಿದೆ. ಮೃತದೇಹಗಳನ್ನು ಸುಡಲು ಕುಟುಂಬಸ್ಥರಿಗೆ ಹಣದ ಕೊರತೆ ಎದುರಾಗಿದ್ದು, ಜೊತೆಗೆ ಸುಡಲು ಜಾಗವಿಲ್ಲದೆ ಗಂಗಾ ನದಿಯ ತಟದ ಮರಳಲ್ಲಿ ಹೂತು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗಂಗಾನದಿ ತಟ

By

Published : May 13, 2021, 12:05 PM IST

ಉನ್ನಾವೊ: ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಕೆಲ ದಿನಗಳಿಂದೀಚೆಗೆ ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ಸುದ್ದಿ ಎಲ್ಲೆಡೆ ಭೀತಿ ಮೂಡಿಸಿತ್ತು.

ಇದೀಗ ಕೊರೊನಾಗೆ ಬಲಿಯಾದವರ ಮೃತದೇಹಗಳನ್ನು ಸುಡಲು ಕುಟುಂಬಸ್ಥರಿಗೆ ಹಣದ ಕೊರತೆ ಎದುರಾಗಿದ್ದು, ಜೊತೆಗೆ ಸುಡಲು ಜಾಗವಿಲ್ಲದೆ ಗಂಗಾ ನದಿಯ ತಟದ ಮರಳಲ್ಲಿ ಹೂತು ಹಾಕುತ್ತಿದ್ದಾರೆ. ಈ ಘಟನೆ ಇಲ್ಲಿನ ಜನರಲ್ಲಿ ಭಯ ಮೂಡಿಸಿದೆ.

ಒಂದು ತಿಂಗಳಲ್ಲಿ 300ಕ್ಕೂ ಹೆಚ್ಚು ಮೃತದೇಹಗಳನ್ನು ಘಾಟ್​​ನಲ್ಲಿ ಹೂಳಲಾಗಿದೆ. ಇದಕ್ಕೆ ಕಾರಣ ಅನೇಕ ಕುಟುಂಬಗಳಿಗೆ ಮೃತದೇಹವನ್ನು ಸುಡಲು ಹಣಕಾಸಿನ ಸಮಸ್ಯೆ ಎದುರಾಗಿರುವುದು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಸುಡಲು ಜಾಗವಿಲ್ಲದಿರುವುದು. ಬಕ್ಸಾರ್ ಮತ್ತು ರೌತಾಪುರದ ಎರಡು ಘಾಟ್​ನ ಮರಳಿನ ರಾಶಿಯಲ್ಲಿ ಹೆಣಗಳನ್ನು ಹೂತು ಹಾಕುತ್ತಿರುವ ಪರಿಸ್ಥಿತಿ ಕಂಡುಬಂದಿದೆ.

ಕೊರೊನಾ ಸೋಂಕು ಪತ್ತೆಯಾದವರು ಮಾತ್ರವಲ್ಲದೆ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣ ಹೊಂದಿದ್ದವರೂ ಸಹ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಸಾವಿರಕ್ಕೆ ಏರಿಕೆಯಾಗುತ್ತಿದೆ.

ABOUT THE AUTHOR

...view details