ನವದೆಹಲಿ :ಇಂದು ವಿಶ್ವ ರೇಬೀಸ್ ದಿನಾಚರಣೆ ಹಿನ್ನೆಲೆ '2030ರ ವೇಳೆಗೆ ಭಾರತದಿಂದ ರೇಬೀಸ್ ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ'ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಸಿರು ನಿಶಾನೆ ತೋರಿದ್ದಾರೆ. 2030ರ ವೇಳೆ ನಾವು ರೇಬೀಸ್ ಮುಕ್ತರಾಗಬೇಕಿದೆ ಎಂದಿದ್ದಾರೆ.
ಬಳಿಕ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವರು, ರೇಬೀಸ್ ಚುಚ್ಚು ಮದ್ದಿನ ದರ ಇಳಿಕೆ ಮಾಡುವಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕಾರ್ಯ ಪ್ರವೃತ್ತವಾಗಿದೆ. 2030ರ ವೇಳೆಗೆ ರೇಬೀಸ್ ರೋಗದ ವಿರುದ್ಧ ಜಯ ದಾಖಲಿಸಲಿದ್ದೇವೆ.