ಕರ್ನಾಟಕ

karnataka

ETV Bharat / bharat

ಅಂಬಾನಿ ಮನೆ ಬಳಿ ಸ್ಫೋಟಕವಿದ್ದ ವಾಹನ ಪ್ರಕರಣ: ಕಾರು ಮಾಲೀಕನ ಮೃತದೇಹ ಪತ್ತೆ - ಮಹಾರಾಷ್ಟ್ರ ಇತ್ತೀಚಿನ ಸುದ್ದಿ

ಖ್ಯಾತ ಉದ್ಯಮಿ ಮುಕೇಶ್​ ಅಂಬಾನಿ ಮನೆಯ ಬಳಿ ನಿಲ್ಲಿಸಿದ್ದ ಎಸ್​ಯುವಿ ಕಾರು ಮಾಲೀಕನ ಮೃತದೇಹ ಇದೀಗ ಥಾಣೆಯಲ್ಲಿ ಪತ್ತೆಯಾಗಿದೆ.

SUV outside Ambani’s house
SUV outside Ambani’s house

By

Published : Mar 5, 2021, 4:48 PM IST

Updated : Mar 5, 2021, 5:27 PM IST

ಥಾಣೆ:ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಕಾರು ಮಾಲೀಕನ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತು ಪತ್ತೆ

ಒಂದು ವಾರದ ಹಿಂದೆ ಮುಂಬೈನಲ್ಲಿರುವ ಮುಖೇಶ್​​ ಅಂಬಾನಿ ನಿವಾಸ ಆಂಟಿಲಿಯಾ ಬಳಿ 21 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಲು 10 ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ತನಿಖೆ ನಡೆಸುತ್ತಿವೆ.

ಕಾರನ್ನು ಪಾರ್ಕ್‌ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮನೆಯ ಮುಂದೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತನ್ನು ಮುಂಬೈ ಅಪರಾಧ ವಿಭಾಗ​ ಪೊಲೀಸರು ಪತ್ತೆ ಹೆಚ್ಚಿದ್ದರು. ಇದರ ಬೆನ್ನಲ್ಲೇ ಕಾರು ಮಾಲೀಕ ಮನ್​​ಸುಖ್ ಹಿರೇನ್​ ಮೃತದೇಹ ಪತ್ತೆಯಾಗಿದ್ದು, ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.

Last Updated : Mar 5, 2021, 5:27 PM IST

ABOUT THE AUTHOR

...view details