ಮುಂಬೈ(ಮಹಾರಾಷ್ಟ್ರ):ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಸುಮಾರು 800 ಸಿಸಿಟಿವಿಗಳ ಮೊರೆ ಹೋಗಿದೆ.
ಪ್ರಕರಣ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮುಂಬೈನಲ್ಲಿನ 800 ಸಿಸಿಟಿವಿಗಳ ದೃಶ್ಯಾವಳಿ ಆಧರಿಸಿ ಪ್ರಕರಣ ಬೇಧಿಸಲು ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 40 ಜನರ ಹೇಳಿಕೆ ಪಡೆದುಕೊಂಡಿರುವ ತನಿಖಾ ಸಂಸ್ಥೆ, ಇದರಲ್ಲಿ 8 ಜನರ ಹೇಳಿಕೆ ಪ್ರಮುಖವಾಗಿದೆ ಎಂದು ದಾಖಲು ಮಾಡಿಕೊಂಡಿದೆ.