ಕರ್ನಾಟಕ

karnataka

ETV Bharat / bharat

ಮನ್ಸುಖ್​ ಹಿರೇನ್ ಸಾವು ಪ್ರಕರಣ​: 3 ದಿನಗಳು ಕಳೆದರೂ ಎನ್​ಐಎಗೆ ದಾಖಲೆ ಹಸ್ತಾಂತರಿಸದ ಎಟಿಎಸ್ - ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ

ಮನ್ಸುಖ್​ ಹಿರೇನ್ ನಿಗೂಢ ಸಾವು ಪ್ರಕರಣವನ್ನು ಕಳೆದ ಮೂರು ದಿನಗಳ ಹಿಂದೆ ಎನ್​ಐಎ ಹೆಗಲಿಗೆ ಕೇಂದ್ರ ಗೃಹ ಸಚಿವಾಲಯ ವಹಿಸಿದ್ದು, ಇದಕ್ಕೆ ಸಂಬಂಧಿತ ದಾಖಲೆಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇನ್ನೂ ಹಸ್ತಾಂತರಿಸಿಲ್ಲ ಎನ್ನಲಾಗ್ತಿದೆ.

ಮನ್ಸುಖ್​ ಹಿರೇನ್ ಸಾವು ಪ್ರಕರಣ
ಮನ್ಸುಖ್​ ಹಿರೇನ್ ಸಾವು ಪ್ರಕರಣ

By

Published : Mar 24, 2021, 12:03 PM IST

ಮುಂಬೈ: ಉದ್ಯಮಿ ಮನ್ಸುಖ್​ ಹಿರೇನ್ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಕ್ಕೆ ಹಸ್ತಾಂತರ ಮಾಡಲಾಗಿದ್ದು, ಮೂರು ದಿನಗಳು ಕಳೆದರೂ ಕೂಡ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇನ್ನೂ ಸಂಬಂಧಿತ ದಾಖಲೆಗಳನ್ನು ಹಸ್ತಾಂತರಿಸಿಲ್ಲ ಎಂದು ಎನ್‌ಐಎ, ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಮುಂಚೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಈ ಪ್ರಕರಣದ ತನಿಖೆ ನಡೆಸುತ್ತಿತ್ತು. ಆದರೆ ಕಳೆದ ಮೂರು ದಿನಗಳ ಹಿಂದೆ (ಶನಿವಾರ) ತನಿಖೆ ಜವಾಬ್ದಾರಿಯನ್ನು ಎನ್​ಐಎ ಹೆಗಲಿಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಈ ಹಿಂದೆ ನಡೆಸಿದ ತನಿಖೆ ಕುರಿತಾದ ಮಾಹಿತಿಯನ್ನು ಇನ್ನೂ ಎನ್‌ಐಎಗೆ ಹಸ್ತಾಂತರಿಸಿಲ್ಲ ಎನ್ನಲಾಗ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಎಟಿಎಸ್ ಶನಿವಾರ ತಡರಾತ್ರಿ ಬಂಧಿಸಿದ್ದು, 25 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಮುಂಬೈ ಪೊಲೀಸ್ ಕಾನ್ಸ್​ಟೇಬಲ್ ವಿನಾಯಕ್ ಶಿಂಧೆ ಮತ್ತು ಬುಕ್ಕಿ ನರೇಶ್ ಧಾರೆ ಬಂಧಿತ ಆರೋಪಿಗಳು.

ಇದನ್ನೂ ಓದಿ:ಮನ್ಸುಖ್​ ಹಿರೇನ್ ಡೆತ್​ ಕೇಸ್​: ತನಿಖೆ ಹೊಣೆ ರಾಷ್ಟ್ರೀಯ ತನಿಖಾ ದಳದ ಹೆಗಲಿಗೆ

ಪ್ರಕರಣ ಹಿನ್ನೆಲೆ:

ಫೆ. 18 ರಂದು ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್​ ಇರಿಸಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಮಾರ್ಚ್ 5ರಂದು ಥಾಣೆ ಜಿಲ್ಲೆಯ ಮುಂಬ್ರಾದ ರೇತಿ ಬಂದರ್ ಪ್ರದೇಶದಲ್ಲಿರುವ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.

ABOUT THE AUTHOR

...view details