ಕರ್ನಾಟಕ

karnataka

ETV Bharat / bharat

ಮೋದಿ 'ಮನ್‌ ಕೀ ಬಾತ್‌'ನಿಂದ ಕೇಂದ್ರ ಸರ್ಕಾರಕ್ಕೆ 30 ಕೋಟಿ ರೂ ಆದಾಯ - radio programme Mann Ki Baat

ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳು ನಡೆಸಿಕೊಡುತ್ತಿರುವ ಮನ್​​ ಕೀ ಬಾತ್​ನಿಂದ ಎಷ್ಟು ಆದಾಯ ಬಂದಿದೆ ಎಂಬುದರ ಬಗ್ಗೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

Mann Ki Baat
Mann Ki Baat

By

Published : Jul 19, 2021, 10:26 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್​ ಕೀ ಬಾತ್​ನಿಂದ ಇಲ್ಲಿಯವರೆಗೆ 30.80 ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ರಾಜ್ಯಸಭೆಗೆ ಸಚಿವ ಅನುರಾಗ್​ ಠಾಕೂರ್​ ಮಾಹಿತಿ ನೀಡಿದ್ದಾರೆ.

2014ರಿಂದ ಪ್ರತಿ ತಿಂಗಳ ಕೊನೆಯ ಭಾನುವಾರ 'ಮನ್​ ಕೀ ಬಾತ್'​ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುತ್ತಿದ್ದು, ಈ ಕಾರ್ಯಕ್ರಮದಿಂದ 2017-18ರಲ್ಲಿ ಅತಿ ಹೆಚ್ಚು ಅಂದರೆ 10.64 ಕೋಟಿ ರೂ. ಆದಾಯ ಬಂದಿರುವುದಾಗಿ ತಿಳಿಸಿದ್ದಾರೆ. ಪ್ರಸಾರ ಭಾರತಿ ಇಲ್ಲಿಯವರೆಗೆ 78 ಎಪಿಸೋಡ್ ಪ್ರಸಾರ ಮಾಡಿರುವುದಾಗಿ ರಾಜ್ಯಸಭೆಯಲ್ಲಿ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.

ಸಚಿವರು ತಿಳಿಸಿರುವ ಪ್ರಕಾರ, 2014-15ರಲ್ಲಿ 1.16 ಕೋಟಿ ರೂ. 2015-16ರಲ್ಲಿ 2.81ಕೋಟಿ, 2016-17ರಲ್ಲಿ 5.14 ಕೋಟಿ ರೂ. 2017-18ರಲ್ಲಿ 10.64 ಕೋಟಿ ರೂ. 2018-19ರಲ್ಲಿ 7.47 ಕೋಟಿ ರೂ. 2019-20ರಲ್ಲಿ 2.56 ಕೋಟಿ ರೂ ಹಾಗೂ 2020-21ರಲ್ಲಿ 1.02 ಕೋಟಿ ರೂ. ಬಂದಿದೆ ಎಂದು ಹೇಳಿದ್ದಾರೆ. 2018ರಿಂದ 2020ರ ಅವಧಿಯಲ್ಲಿ 14.35 ಕೋಟಿ ಜನರನ್ನ ತಲುಪಿರುವುದಾಗಿ ಅವರು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: 45ಕ್ಕೂ ಹೆಚ್ಚು ದೇಶಗಳಿಂದ ಪೆಗಾಸಸ್​ ಬಳಕೆ: ಭಾರತ ಮಾತ್ರ ಟಾರ್ಗೆಟ್​ ಯಾಕೆ? ರವಿಶಂಕರ್​ ಪ್ರಸಾದ್

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಕೊರೊನಾ ವೈರಸ್, ವ್ಯಾಕ್ಸಿನೇಷನ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ದೇಶದ ಜನರಿಗೆ ಮಹತ್ವದ ಮಾಹಿತಿ ನೀಡುವ ಕೆಲಸ ಮಾಡ್ತಿದ್ದಾರೆ.

ABOUT THE AUTHOR

...view details