ಆನಂದಪುರ (ಪಂಜಾಬ್): ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಿದ್ದಾರೆ ಎಂಬ ಟೀಕೆಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ ಪಂಜಾಬ್‌ನ ಶ್ರೀ ಆನಂದಪುರದಲ್ಲಿ ಹೋಮಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ಮನೀಶ್ ತಿವಾರಿ ವೇದಿಕೆಯಲ್ಲಿ ಮೋದಿ ಕೈ ಕುಲುಕಿದ್ದರು.
ನಾವು ಪಂಜಾಬಿಗಳು, ಸಣ್ಣ ಮನಸ್ಸಿನವರಲ್ಲ: ಮೋದಿ ಕೈ ಕುಲುಕಿದ್ದಕ್ಕೆ ಮನೀಶ್ ತಿವಾರಿ ಪ್ರತಿಕ್ರಿಯೆ - shaking hand with PM Modi
ಪ್ರಧಾನಿ ಜೊತೆ ಕೈ ಕುಲುಕಿದ್ದು ಶಿಷ್ಟಾಚಾರಕ್ಕಾಗಿ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವೀಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದ ವಿಷಯಕ್ಕೆ ಅಂತಿಮ ವಿರಾಮ ನೀಡಿದ್ದಾರೆ.
ಪ್ರಧಾನಿ ಜೊತೆ ಕೈ ಕುಲುಕಿದ್ದು ಶಿಷ್ಟಾಚಾರಕ್ಕಾಗಿ ಮಾತ್ರ
"ನರೇಂದ್ರ ಮೋದಿಯವರು ನನ್ನ ಸಂಸದೀಯ ಕ್ಷೇತ್ರವಾದ ಶ್ರೀ ಆನಂದಪುರ ಸಾಹಿಬ್‌ಗೆ ಭೇಟಿ ನೀಡಿದ್ದಾರೆಂದರೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶಿಷ್ಟಾಚಾರದ ಪ್ರಕಾರ ನಾನು ಗೌರವಿಸಬೇಕು. ನಾವು ಪಂಜಾಬಿಗಳು, ಸಣ್ಣ ಮನಸ್ಸಿನವರಲ್ಲ ಅಥವಾ ಸಣ್ಣ ಹೃದಯದವರಲ್ಲ" ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೊಹಾಲಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ: ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ತೊಟ್ಟವರಿಗೆ ನೋ ಎಂಟ್ರಿ
TAGGED:
shaking hand with PM Modi