ಕರ್ನಾಟಕ

karnataka

ETV Bharat / bharat

ದೆಹಲಿ ಮೇಯರ್​ ಚುನಾವಣೆ ಸತತ ಮೂರನೇ ಬಾರಿಗೆ ಮುಂದೂಡಿಕೆ..ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಆಪ್​ ನಿರ್ಧಾರ - ಬಯಲಾಗಲಿದೆ 15 ವರ್ಷಗಳ ಭ್ರಷ್ಟಾಚಾರ

ದೆಹಲಿಯಲ್ಲಿ ಮೇಯರ್​ ಚುನಾವಣೆಯನ್ನು ಸತತ ಮೂರನೇ ಬಾರಿಗೆ ಮುಂದೂಡಿಕೆ - ಚುನಾವಣೆ ನಡೆಸದೇ ಎಂಸಿಡಿ ಸದನ ಮುಂದೂಡಿಕೆ - ಬಿಜೆಪಿಯು ಮತ್ತೊಮ್ಮೆ ಚುನಾವಣೆ ನಡೆಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪ- ಇದೀಗ ಮೇಯರ್ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ.

Manish Sisodia
ಮನೀಶ್ ಸಿಸೋಡಿಯಾ

By

Published : Feb 6, 2023, 6:58 PM IST

ನವದೆಹಲಿ:ದೆಹಲಿಯಲ್ಲಿ ಮೇಯರ್ ಚುನಾವಣೆಯನ್ನು ಸತತವಾಗಿ ಮೂರನೇ ಬಾರಿಗೆ ಮುಂದೂಡಿಕೆ ಮಾಡಲಾಗಿದೆ. ಈ ಚುನಾವಣೆ ಯಾವಾಗ ನಡೆಯಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಕಳೆದ ಮೂರು ಬಾರಿ ಸದನದಲ್ಲಿ ಗದ್ದಲ ಉಂಟಾಗಿ ಸದನದ ಕಲಾಪವನ್ನು ಮುಂದೂಡಲಾಗುತ್ತಿದೆ.

''ಇದೀಗ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇಂದೂ ಕೂಡ ನಮ್ಮ ಎಲ್ಲಾ ಕೌನ್ಸಿಲರ್‌ಗಳು ಸದನದಲ್ಲಿ ಶಾಂತವಾಗಿದ್ದಾರೆ'' ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ''ನಮ್ಮ ಪಾಲಿಕೆ ಸದಸ್ಯರು, ಮೇಯರ್, ಉಪಮೇಯರ್, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಬಯಸಿದ್ದರು. ಆದರೆ, ಬಿಜೆಪಿ ಇಂದು ತನ್ನ ಗೂಂಡಾಗಿರಿಯಿಂದ ಪ್ರಜಾಪ್ರಭುತ್ವವನ್ನು ದೂರವಿಟ್ಟು ಮೇಯರ್ ಆಯ್ಕೆಗೆ ಅವಕಾಶ ನೀಡುತ್ತಿಲ್ಲ''ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ:''ಈಗ ಕಾನೂನಿನ ಪ್ರಕಾರವೇ ಮೇಯರ್ ಆಯ್ಕೆಯಾಗುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ'' ಎಂದ ಅವರು, ನ್ಯಾಯಾಲಯ ನಮ್ಮ ಮಾತನ್ನು ಆಲಿಸಿದರೆ, ಕಾನೂನು ಪ್ರಕಾರವೇ ಮೇಯರ್ ಚುನಾವಣೆ ನಡೆಯಲಿದೆ ಎಂದು ಭಾವಿಸುತ್ತೇವೆ. ಮೇಯರ್ ಆಯ್ಕೆಯಾದ ನಂತರ ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯೂ ನಡೆಯಲಿದೆ ಎಂದು ಹೇಳಿದರು.

ಬಯಲಾಗಲಿದೆ 15 ವರ್ಷಗಳ ಭ್ರಷ್ಟಾಚಾರ:''ದೆಹಲಿಯ ಜನರು 15 ವರ್ಷಗಳ ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದಾರೆ. ಪ್ರಾಮಾಣಿಕ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಎಂಸಿಡಿಯಲ್ಲಿ ಮೊದಲ ಬಾರಿಗೆ ಬಹುಮತ ನೀಡಿದ್ದಾರೆ'' ಎಂದು ಸಿಸೋಡಿಯಾ ಹೇಳಿದರು. ''ನಮ್ಮಲ್ಲಿ 134 ಕಾರ್ಪೊರೇಟರ್‌ಗಳು ಇದ್ದಾರೆ. ನಮಗೆ ಸಂಖ್ಯಾಬಲವಿದೆ. ಆದರೆ, ಬಿಜೆಪಿಯವರು ನಮಗೆ ಮೇಯರ್ ಆಗಲು ಬಿಡುತ್ತಿಲ್ಲ. ಆಮ್ ಆದ್ಮಿ ಪಕ್ಷ ಮೇಯರ್ ಆದರೆ, ಕಳೆದ 15 ವರ್ಷಗಳಲ್ಲಿ ಎಂಸಿಡಿಯಲ್ಲಿ ತಾವು ಮಾಡಿರುವ ಭ್ರಷ್ಟಾಚಾರ ಸಾರ್ವಜನಿಕರ ಮುಂದೆ ಬರಲಿದೆ ಎಂಬ ಭಯ ಅವರಿಗೆ ಇದೆ. ಅವರು ನಮ್ಮ ಪಕ್ಷದವರನ್ನು ಮೇಯರ್​ ಗದ್ದುಗೆ ಏರಲು ಬಿಡುತ್ತಿಲ್ಲ ಎಂಬ ವಿಷಯ ಸ್ಪಷ್ಟವಾಗಿದೆ'' ಎಂದರು.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಕಾನೂನು ಬಾಹಿರ:ಇಂದು ಸದನದಲ್ಲಿ 10 ಜನ ಕುಲಪತಿಗಳು ಮತ ಚಲಾಯಿಸುತ್ತಾರೆ ಎಂದು ಹೇಳಿದ್ದರೂ, ಮೇಯರ್, ಉಪಮೇಯರ್ ಮತ್ತು ಸದಸ್ಯರ ಚುನಾವಣೆಯಲ್ಲಿ ಪದಾಧಿಕಾರಿಗಳು ಮತ ಚಲಾಯಿಸುತ್ತಾರೆ ಎಂದು ಸಂವಿಧಾನದಲ್ಲಿ ಬರೆಯಲಾಗಿಲ್ಲ ಎಂದು ಸಿಸೋಡಿಯಾ ಹೇಳಿದರು.

ಚುನಾವಣೆಗೆ ಅವಕಾಶ ಕೊಡದ ಬಿಜೆಪಿ - ಆರೋಪ:ಸ್ಥಾಯಿ ಸಮಿತಿಯ ಬಗ್ಗೆ ಸಂವಿಧಾನ 243(ಆರ್‌)ನಲ್ಲಿ ಈ ಹಿರಿಯರು ಮತದಾನ ಮಾಡುವಂತಿಲ್ಲ ಎಂದು ಬರೆಯಲಾಗಿದೆ ಎಂದ ಅವರು, ಮೇಯರ್ ಆದ ನಂತರ ಮೇಯರ್ ಅಧ್ಯಕ್ಷರಾಗಿದ್ದು, ಅವರ ಉಸ್ತುವಾರಿಯಲ್ಲಿ ಉಪಮೇಯರ್ ಹಾಗೂ 6 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ ಎಂದರು. ಎಎಪಿಯ ಇಬ್ಬರು ಶಾಸಕರ ಮೇಲೆ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ ಎಂದರು. ಮತ ಹಾಕುವುದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಭ್ರಷ್ಟಾಚಾರದ ಆರೋಪ ಹಲವರ ಮೇಲಿದೆ. ಚುನಾವಣೆಗೆ ಅವಕಾಶ ಕೊಡಬಾರದು ಎಂಬ ಮನಸ್ಸಿನಿಂದ ಬಿಜೆಪಿ ಇಂದು ಬಂದಿತ್ತು ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ:6 ವರ್ಷದ ಬಾಲಕನ ಕಿಡ್ನ್ಯಾಪ್, ಹತ್ಯೆ: 4 ಕೋಟಿಗೆ ಬೇಡಿಕೆ ಇಟ್ಟಿದ್ದ ದುರುಳರು!

ABOUT THE AUTHOR

...view details