ಕರ್ನಾಟಕ

karnataka

ETV Bharat / bharat

ಮಣಿಪುರ ಉಗ್ರರ ದಾಳಿ.. ಸ್ವಗ್ರಾಮಕ್ಕೆ ಬರಲಿದೆ ಅಸ್ಸಾಂ ರೈಫಲ್ಸ್ ಜವಾನ್ ಸುಮನ್ ಸ್ವರ್ಗೀಯರಿ ಪಾರ್ಥೀವ ಶರೀರ.. - Assam Rifles Jawan Suman Swargiary

ಸುಮನ್ ಸ್ವರ್ಗೀಯರಿ (Assam Rifles Jawan Suman Swargiary) ಎಂಟು ವರ್ಷಗಳ ಹಿಂದೆ ಅಸ್ಸಾಂ ರೈಫಲ್ಸ್‌ಗೆ ಸೇರಿದ್ದರು. ಅವರ ತಂದೆ ದಿವಂಗತ ಕನಕ ಸ್ವರ್ಗ್ಯಾರಿ ಕೂಡ ಉಗ್ರರ ದಾಳಿಯಲ್ಲಿ ನಿಧನರಾಗಿದ್ದರು. ಅವನ ಮನೆಯಲ್ಲಿ ಅವರ ತಾಯಿ, ಹೆಂಡತಿ ಮತ್ತು ಅವರ ಎರಡು ವರ್ಷದ ಮಗ ಮಾತ್ರ ಉಳಿದುಕೊಂಡಿದ್ದಾರೆ..

soldier dead body
ಪಾರ್ಥೀವ ಶರೀರ

By

Published : Nov 14, 2021, 5:24 PM IST

ಮಣಿಪುರ :ಇಲ್ಲಿನ ಸಿಂಘಾತ್ (Singhath) ಎಂಬಲ್ಲಿ ಶನಿವಾರ ನಡೆದ ಉಗ್ರರ ದಾಳಿ (Manipur terror attack)ಯಲ್ಲಿ ಅಸ್ಸಾಂ ರೈಫಲ್ಸ್ ಜವಾನ್ ಸುಮನ್ ಸ್ವರ್ಗೀಯರಿ ಹುತಾತ್ಮರಾಗಿದ್ದಾರೆ. ಅವರ ಪಾರ್ಥೀವ ಶರೀರವು ಇಂದು (ಭಾನುವಾರ) ಸಂಜೆ ಹುಟ್ಟೂರಾದ ತೊಯ್ರಾಕುಚಿಯನ್ನು ತಲುಪಲಿದೆ.

ಸುಮನ್ ಸ್ವರ್ಗೀಯರಿ (Suman Swargiary) ಎಂಟು ವರ್ಷಗಳ ಹಿಂದೆ ಅಸ್ಸಾಂ ರೈಫಲ್ಸ್‌ಗೆ ಸೇರಿದ್ದರು. ಅವರ ತಂದೆ ದಿವಂಗತ ಕನಕ ಸ್ವರ್ಗ್ಯಾರಿ ಕೂಡ ಉಗ್ರರ ದಾಳಿಯಲ್ಲಿ ನಿಧನರಾಗಿದ್ದರು. ಅವರ ಮನೆಯಲ್ಲಿ ಅವರ ತಾಯಿ, ಹೆಂಡತಿ ಮತ್ತು ಅವರ ಎರಡು ವರ್ಷದ ಮಗ ಮಾತ್ರ ಉಳಿದುಕೊಂಡಿದ್ದಾರೆ.

ಮಣಿಪುರದ ಸಿಂಘಾತ್​ ಎಂಬಲ್ಲಿ ನಡೆದ ಘಟನೆಯಲ್ಲಿ ಕಮಾಂಡಿಂಗ್​ ಆಫೀಸರ್​ ಕರ್ನಲ್​ ವಿಪ್ಲವ್​ ತ್ರಿಪಾಠಿ ಅವರ ಪತ್ನಿ, ಮಗು ಸೇರಿ ನಾಲ್ವರು ಪ್ಯಾರಾ ಮಿಲಿಟರಿ ಯೋಧರು ಮೃತಪಟ್ಟಿದ್ದಾರೆ. ಈ ದಾಳಿಯ ಹಿಂದೆ ಮಣಿಪುರ ಮೂಲದ ಉಗ್ರಗಾಮಿ ಸಂಘಟನೆ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಓದಿ:Manipur ambush: ಉಗ್ರರ ದಾಳಿ ಖಂಡಿಸಿದ ನಮೋ, ಅಪರಾಧಿಗಳನ್ನ ಬಿಡಲ್ಲ ಎಂದ ರಕ್ಷಣಾ ಸಚಿವ

ABOUT THE AUTHOR

...view details