ಇಂಪಾಲ್(ಮಣಿಪುರ):ಮಣಿಪುರ ವಿಧಾನಸಭೆ ಚುನಾವಣೆಯ ಮೊದಲನೇ ಹಂತ ಮುಕ್ತಾಯವಾಗಿದ್ದು, 173 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಶೇ. 78ರಷ್ಟು ವೋಟಿಂಗ್ ಆಗಿದೆ. 60 ಕ್ಷೇತ್ರಗಳ ವಿಧಾನಸಭೆ ಕ್ಷೇತ್ರಗಳ ಪೈಕಿ ಇಂದು 38 ಸ್ಥಾನಗಳಿಗೆ ಮತದಾನವಾಗಿದ್ದು, 15 ಮಹಿಳೆಯರು ಸೇರಿದಂತೆ 173 ಅಭ್ಯರ್ಥಿಗಳು ಕಣದಲ್ಲಿದ್ದರು. ಐದು ಜಿಲ್ಲೆಗಳಲ್ಲಿ ಇಂಪಾಲ್ ಪೂರ್ವ, ಇಂಪಾಲ್ ಪಶ್ಚಿಮ, ಬಿಷ್ಣುಪುರ್ ಚುರಾಚಂದ್ಪುರ ಪ್ರಮುಖ ಮತ ಕ್ಷೇತ್ರಗಳಾಗಿದ್ದವು.
ಇದನ್ನೂ ಓದಿರಿ:ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್ ಹಾಲಿನ ದರದಲ್ಲಿ ಲೀಟರ್ಗೆ 2 ರೂ. ಏರಿಕೆ
1,721 ಮತಗಟ್ಟೆಗಳಲ್ಲಿ 5,80,607 ಪುರುಷ ಮತದಾರರು, 6,28,657 ಮಹಿಳೆಯರು ಸೇರಿದಂತೆ 175 ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆಂದು ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದ್ದು, ಕೋವಿಡ್ ಸೋಂಕಿಗೊಳಗಾಗಿದ್ದರು ಹಾಗೂ ಕ್ವಾರಂಟೈನ್ಗೊಳಗಾದವರಿಗೆ ಕೊನೆ ಸಮಯದಲ್ಲಿ ವೋಟ್ ಮಾಡುವ ಅವಕಾಶ ನೀಡಲಾಗಿತ್ತು. ಮತದಾನದ ವೇಳೆ 381 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, ಒಂದು ಮತಗಟ್ಟೆಯಲ್ಲಿ ಸಂಪೂರ್ಣವಾಗಿ ಅಂಗವಿಕಲ ಸಿಬ್ಬಂದಿ ನಿರ್ವಹಿಸಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್, ಸ್ಪೀಕರ್ ಖೇಮ್ಚಂದ್ ಸಿಂಗ್, ಡಿಸಿಎಂ ಯುಮ್ನಮ್ ಜಾಯ್ಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ಅವರ ಭವಿಷ್ಯ ನಿರ್ಧಾರವಾಗಿದೆ.