ಕರ್ನಾಟಕ

karnataka

ETV Bharat / bharat

ಕಾಲಿಯಾ ರಫೀಕ್​ ಹತ್ಯೆ ಪ್ರಕರಣ: ಆರೋಪಿ ಜಿಯಾನನ್ನು ಕಸ್ಟಡಿಗೆ ಪಡೆಯಲಿರುವ ಮಂಗಳೂರು ಪೊಲೀಸ್​ - ಮುಂಬೈ ವಿಮಾನ ನಿಲ್ದಾಣ

ಕುಖ್ಯಾತ ರೌಡಿಶೀಟರ್ ಕಾಲಿಯಾ ರಫೀಕ್​ ಹತ್ಯೆ (Rowdy sheeter Kalia Rafiq murder case) ಪ್ರಕರಣದ ಆರೋಪಿ ಜಿಯಾ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai International Airport) ಕೇರಳದ ಎಟಿಎಸ್ (The Anti-Terrorism Squad) ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮಂಗಳೂರು ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ. ​

jiya
jiya

By

Published : Nov 13, 2021, 1:48 PM IST

ಮಂಗಳೂರು: ಕುಖ್ಯಾತ ರೌಡಿಶೀಟರ್ ಕಾಲಿಯಾ ರಫೀಕ್​ನ ಹತ್ಯೆ (Rowdy sheeter Kalia Rafiq murder case) ಪ್ರಕರಣದ ಆರೋಪಿ ಜಿಯಾನನ್ನು ಮಂಗಳೂರು ಪೊಲೀಸರು (Mangalore Police) ಕಸ್ಟಡಿಗೆ ನೀಡುವಂತೆ ಕೋರ್ಟ್ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಹತ್ಯೆಯಾದ ಕೇರಳದ ಕಾಸರಗೋಡು ಜಿಲ್ಲೆಯ ಕಾಲಿಯಾ ರಫೀಕ್ ನನ್ನು ಹತ್ಯೆ ಆರೋಪಿ ಯೂಸುಫ್ ಜಿಯಾ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai International Airport) ಕೇರಳದ ಎಟಿಎಸ್ (The Anti-Terrorism Squad) ಗುರುವಾರ ರಾತ್ರಿ ಬಂಧಿಸಿದೆ.

ಕಾಲಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರ ಬಂಧನವಾಗಿದ್ದರೂ ವಿದೇಶಕ್ಕೆ ಪರಾರಿಯಾಗಿದ್ದ ಜಿಯಾ ಎಂಬಾತನನ್ನು ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಯಾನನ್ನು ವಿಚಾರಣೆ ನಡೆಸಲು ಕೇರಳ ನ್ಯಾಯಾಲಯಕ್ಕೆ ಮನವಿ ಮಾಡಲು ಮಂಗಳೂರು ಪೊಲೀಸರು ನಿರ್ಧರಿಸಿದ್ದಾರೆ.

ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾಲಿಯಾ ರಫೀಕ್ ನನ್ನು 2017 ಫೆ.14 ರಂದು ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಗುಂಡು ಹಾರಿಸಿ ಬಳಿಕ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜಿಯಾ ಕರ್ನಾಟಕ ಮತ್ತು ಕೇರಳ ಪೊಲೀಸರಿಗೆ ಬೇಕಾಗಿದ್ದ. ಆದರೆ, ಆತ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಇತ್ತೀಚಿಗೆ ಊರಿಗೆ ಬಂದಿದ್ದ ಈತ ಮತ್ತೆ ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಕೇರಳದ ಎಟಿಎಸ್ ಈತನನ್ನು ಬಂಧಿಸಿತ್ತು.

ABOUT THE AUTHOR

...view details