ಕರ್ನಾಟಕ

karnataka

ETV Bharat / bharat

ಸರ್ಕಾರಿ ವೈದ್ಯರಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು - ಸರ್ಕಾರಿ ವೈದ್ಯರಾಗಿ ನೇಮಕಗೊಂಡು ಇತಿಹಾಸ

ನಾನು ಅದೆಷ್ಟೇ ಸಾಧನೆ ಮಾಡಿದರೂ ಅನುಭವಿಸಿದ ಕಳಂಕ ಮತ್ತು ತಾರತಮ್ಯಗಳನ್ನು ಮರೆಯಲು ಸಾಧ್ಯವಿಲ್ಲ. ನನ್ನ ಹದಿಹರೆಯದ ವಯಸ್ಸು ನಿಜವಾಗಿಯೂ ಕೆಟ್ಟದಾಗಿತ್ತು. ವೈದ್ಯನಾಗುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ, ಜೀವನದಲ್ಲಿ ಮುಂದೆ ಹೇಗೆ ಬದುಕುವುದು ಮತ್ತು ಇವೆಲ್ಲವನ್ನೂ ಹೇಗೆ ಜಯಿಸುವುದು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು ಎಂದು ಮಂಗಳಮುಖಿ ರಾಥೋಡ್ ಹೇಳಿದರು.

ಸರ್ಕಾರಿ ವೈದ್ಯರಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು
mangalmukhi-who-created-history-by-being-appointed-as-a-government-doctor

By

Published : Dec 1, 2022, 12:49 PM IST

ಹೈದಬಾರಾದ್: ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ದಾಟಿ ಮಂಗಳಮುಖಿಯರಿಬ್ಬರು ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್ ಆಗಿದ್ದಾರೆ. ಇವರಿಬ್ಬರೂ ಈಗ ತೆಲಂಗಾಣ ಸರ್ಕಾರಿ ನೌಕರಿಗೆ ಸೇರುವ ಮೂಲಕ ಇತಿಹಾಸ ಬರೆದಿದ್ದಾರೆ. ಸರ್ಕಾರಿ ವೈದ್ಯರಾಗಿ ನೇಮಕಗೊಂಡ ಮೊದಲ ಮಂಗಳಮುಖಿಯರು ಎಂಬ ಗೌರವ ಪಡೆದಿದ್ದಾರೆ. ಪ್ರಾಚಿ ರಾಥೋಡ್ ಮತ್ತು ರುತ್ ಜಾನ್ ಪಾಲ್ ಈ ಇಬ್ಬರು ಮಂಗಳಮುಖಿಯರು ಇತ್ತೀಚೆಗೆ ಸರ್ಕಾರಿ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ (OGH) ನಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇವೆಗೆ ಸೇರಿದ್ದಾರೆ.

ಪ್ರಾಚಿ ರಾಠೋಡ್ ಇದಕ್ಕೂ ಮುನ್ನ ಹೈದರಾಬಾದ್‌ನ ಖಾಸಗಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಿಂಗತ್ವದ ಕಾರಣಕ್ಕಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಲಿಂಗತ್ವದ ಕಾರಣದಿಂದ ಬಾಲ್ಯದಿಂದಲೂ ಅನುಭವಿಸಿದ ಅವಮಾನ, ಯಾತನೆ ಮತ್ತು ಕೆಲಸ ಕಳೆದುಕೊಂಡ ಬಗ್ಗೆ ಮಾಧ್ಯಮದೊಂದಿಗೆ ಪ್ರಾಚಿ ಮಾತನಾಡಿದರು.

'ನಾನು ಅದೆಷ್ಟೇ ಸಾಧನೆ ಮಾಡಿದರೂ ನಾನು ಅನುಭವಿಸಿದ ಕಳಂಕ ಮತ್ತು ತಾರತಮ್ಯಗಳನ್ನು ಮರೆಯಲು ಸಾಧ್ಯವಿಲ್ಲ. ನನ್ನ ಹದಿಹರೆಯದ ವಯಸ್ಸು ನಿಜವಾಗಿಯೂ ಕೆಟ್ಟದಾಗಿತ್ತು. ವೈದ್ಯನಾಗುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ, ಜೀವನದಲ್ಲಿ ಮುಂದೆ ಹೇಗೆ ಬದುಕುವುದು ಮತ್ತು ಇವೆಲ್ಲವನ್ನೂ ಹೇಗೆ ಜಯಿಸುವುದು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು' ಎಂದು ರಾಥೋಡ್ ಹೇಳಿದರು.

ಪ್ರಾಚಿ ರಾಠೋಡ್ ಎಂಬಿಬಿಎಸ್ ಪದವೀಧರರಾಗಿದ್ದಾರೆ. ರಾಥೋಡ್ ಸ್ನಾತಕೋತ್ತರ ಪದವಿ ಪಡೆಯಲು ದೆಹಲಿಗೆ ಹೋಗಿದ್ದರು. ಆದರೆ ಪ್ರತಿಕೂಲ ವಾತಾವರಣದಿಂದಾಗಿ ಹೈದರಾಬಾದ್‌ಗೆ ಹಿಂತಿರುಗಬೇಕಾಯಿತು. ಆದರೆ, ರಾಥೋಡ್ ಇಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಎಮರ್ಜೆನ್ಸಿ ಮೆಡಿಸಿನ್ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ಇದನ್ನೂ ಓದಿ: ವಕೀಲರಾಗಿ ಸೇವೆ ಸಲ್ಲಿಸಲು ಮುಂದಾದ ಮಂಗಳಮುಖಿ: ಒಡಿಶಾದ ಮೊದಲ ಸಾಧಕಿ ಇವರು!

ABOUT THE AUTHOR

...view details