ಕರ್ನಾಟಕ

karnataka

ETV Bharat / bharat

ಮಂಗಳಸೂತ್ರದಿಂದ ಮುರಿದು ಬಿದ್ದ ಮದುವೆ.. ಉತ್ತರ ಪ್ರದೇಶದಲ್ಲಿ ಹಿಂಗೊಂದು ಘಟನೆ! - ಮಂಗಳಸೂತ್ರದಿಂದ ಮುರಿದು ಬಿದ್ದ ಮದುವೆ

ಮಂಗಳಸೂತ್ರ ಇಲ್ಲ ಎಂಬ ಕಾರಣಕ್ಕಾಗಿ ಮದುವೆ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Mangal sotra break marriage in Kannauj
Mangal sotra break marriage in Kannauj

By

Published : May 10, 2021, 9:48 PM IST

ಕನೌಜ್​(ಉತ್ತರ ಪ್ರದೇಶ): ವಿವಿಧ ಕಾರಣಗಳಿಂದಾಗಿ ಮದುವೆ ಮುರಿದು ಬೀಳುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ಮದುವೆ ಮಂಗಳಸೂತ್ರದ ವಿಚಾರಕ್ಕಾಗಿ ಕ್ಯಾನ್ಸಲ್​ ಆಗಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಕನೌಜ್​ನಲ್ಲಿ ಈ ಘಟನೆ ನಡೆದಿದೆ. ಮಂಗಳಸೂತ್ರ ಇಲ್ಲದ ಕಾರಣ ವಧು ಕೋಪಗೊಂಡು ಮದುವೆ ನಿರಾಕರಿಸಿದ್ದಾಳೆ. ಈ ವೇಳೆ, ಮನವೊಲಿಕೆ ಮಾಡಿದ್ರೂ ಆಕೆ ಒಪ್ಪಿಕೊಂಡಿಲ್ಲ.

ಸೌರಿಕ್​ ಪೊಲೀಸ್ ಠಾಣೆಯ ಸುಭಾಷ್​ ನಗರ ಮೊಹಲ್ಲಾ ನಿವಾಸಿ ಸುನಿಲ್ ಕುಮಾರ್ ಗುಪ್ತಾ ಅವರ ಪುತ್ರ ಸಚಿನ್ ಜೊತೆ ಫಾರೂಕಾಬಾದ್​ನ ಯುವತಿ ಮದುವೆ ನಿಶ್ಚಿಯವಾಗಿತ್ತು. ಎರಡು ಕುಟುಂಬದ ಒಪ್ಪಿಗೆ ನಂತರ ಮೇ 8ರಂದು ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಲಾಕ್​ಡೌನ್ ಘೋಷಣೆ ಮಾಡಿರುವ ಕಾರಣ ಮಂಗಳಸೂತ್ರ ತೆಗೆದುಕೊಂಡು ಬರಲು ಸಾಧ್ಯವಾಗಿರಲಿಲ್ಲ. ಇದರ ಮಧ್ಯೆ ಕೂಡ ಮದುವೆ ನಡೆಸಲು ನಿರ್ಧರಿಸಿ, ಆಚರಣೆ ನಡೆಯುತ್ತಿದ್ದವು. ಈ ವೇಳೆ, ಮದುಮಗಳು ಹಾಕಿಕೊಳ್ಳುವ ಮಂಗಳಸೂತ್ರ ಇಲ್ಲ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಮದುವೆ ವೇಳೆ ವಧು ಕೇಳಿದ ಲೆಕ್ಕಕ್ಕೆ ಉತ್ತರ ನೀಡದ ವರ.. ಮದುವೆ ಕ್ಯಾನ್ಸಲ್​ ಮಾಡಿಕೊಂಡ ಯುವತಿ!

ಸಪ್ತಪದಿ ತುಳಿಯಲು ನಿರಾಕರಿಸಿದ ವಧು

ಮಂಗಳಸೂತ್ರ ತರದಿದ್ದಕ್ಕೆ ಕೋಪಗೊಂಡ ವಧು ಸಪ್ತಪದಿ ತುಳಿಯಲು ಹಿಂದೇಟು ಹಾಕಿದ್ದಾಳೆ. ಮದುವೆ ಕ್ಯಾನ್ಸಲ್ ಮಾಡಿಕೊಂಡು ಕುಟುಂಬದೊಂದಿಗೆ ಮನೆ ಕಡೆ ಹೆಜ್ಜೆ ಹಾಕಿದ್ದಾಳೆ. ಈ ವೇಳೆ ಎರಡು ಕಡೆಯವರು ರಾಜಿ ಮಾಡಿಕೊಳ್ಳಲು ಮುಂದಾದರೂ ಪ್ರಯೋಜನವಾಗಿಲ್ಲ.

ABOUT THE AUTHOR

...view details