ಮಂಡ್ಲಾ(ಮಧ್ಯ ಪ್ರದೇಶ): ಏನನ್ನಾದರೂ ಸಾಧಿಸುವ ಉತ್ಸಾಹವಿದ್ದರೆ ಅದು ಖಂಡಿತವಾಗಿಯೂ ಒಬ್ಬ ವ್ಯಕ್ತಿಯನ್ನು ಶ್ರೇಷ್ಠಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಈ ವಿಷಯವನ್ನು ಗಾಯಕಿ ಶೆಫಾಲಿ ಚೌರಾಸಿಯಾ ನಿಜವಾಗಿಸಿದ್ದಾರೆ. ಮಧ್ಯ ಪ್ರದೇಶದ ಮಂಡ್ಲಾ ಎಂಬಲ್ಲಿನ ನೈನ್‌ಪುರದಂತಹ ಪುಟ್ಟ ಪಟ್ಟಣದಿಂದ ಬಂದಿರುವ ಈಕೆ ಕತಾರ್‌ನಲ್ಲಿ ನಡೆಯಲಿರುವ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಹಾಡುಗಳ ಮೂಲಕ ಮೋಡಿ ಮಾಡಲಿದ್ದಾರೆ.
13 ಪ್ರದರ್ಶನಗಳು:ಶೆಫಾಲಿ ಅವರು ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಕಾರ್ಯಕ್ರಮ ನೀಡಲು ಆಯ್ಕೆಯಾಗಿದ್ದಾರೆ. ಗ್ರಾವಿಟಾಸ್ ಮ್ಯಾನೇಜ್‌ಮೆಂಟ್ ಎಫ್ಝಡ್ಇ (Free Zone Establishment) ಇವರನ್ನು ಯುಎಇಗೆ ಆಹ್ವಾನಿಸಿದೆ. ಅಲ್ಲಿ ಅವರು ಒಟ್ಟು 13 ಪ್ರದರ್ಶನಗಳನ್ನು ನೀಡುವರು.