ನವದೆಹಲಿ:ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆ ಚುನಾವಣಾ ಪ್ರಚಾರವು ವರ್ಚುಯಲ್ ಆಗಿರುವುದರಿಂದ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮನೋಜ್ ತಿವಾರಿ ‘ಮಂದಿರ ಅಬ್ ಬನಾನೆ ಲಗಾ ಹೈ, ಭಗವಾ ರಂಗ್ ಚಡಾನೆ ಲಗಾ ಹೈ’ ಎಂಬ ವಿಶೇಷ ಹಾಡು ರಚಿಸಿ ತಾವೇ ಹಾಡಿದ್ದಾರೆ.
ಹಾಡಿನಲ್ಲಿ ತಿವಾರಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದೆ ಎಂದು ಎತ್ತಿ ತೋರಿಸಿದ್ದಾರೆ. ಶ್ರೀಕೃಷ್ಣ ತನ್ನ ಕನಸಿಗೆ ಬರುತ್ತಾನೆ ಎಂಬ ಹೇಳಿಕೆಗಾಗಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕ ಕಾಶಿಯ ಭವ್ಯ ದೇವಾಲಯ ಮತ್ತು ಮೌತ್ರ ದೇವಾಲಯವನ್ನು ಹಾಡಿನಲ್ಲಿ ಬಣ್ಣಿಸಿದ್ದಾರೆ.
ಓದಿ:ಆ್ಯಷಸ್ ಕ್ರಿಕೆಟ್: ಆಸ್ಟ್ರೇಲಿಯಾದ ಮಾರ್ಕ್ ಹ್ಯಾರೀಸ್ಗೆ ಕೊಕ್.. ಉಸ್ಮಾನ್ ಖವಾಜಾಗೆ ಚಾನ್ಸ್
ಇದರೊಂದಿಗೆ ಗೋರಖ್‌ಪುರ ಸಂಸದ ರವಿ ಕಿಶನ್ ಉತ್ತರ ಪ್ರದೇಶದ ಅಭಿವೃದ್ಧಿ ಉಲ್ಲೇಖಿಸಿ "ಯುಪಿ ಮೆ ಸಬ್ ಬಾ" ಹಾಡು ಸಹ ಬಿಡುಗಡೆ ಮಾಡಲಿದ್ದಾರೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.
ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ವಿಧಾನಸಭೆ ಚುನಾವಣೆಗಳ ಹಿನ್ನೆಲೆ ಕೋವಿಡ್ ಏರಿಕೆಯಿಂದಾಗಿ ಜನವರಿ 15 ರವರೆಗೆ ಯಾವುದೇ ಭೌತಿಕ ರಾಜಕೀಯ ಜಾಥಾಗಳು ಮತ್ತು ರೋಡ್‌ಶೋಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಶನಿವಾರ ನಿರ್ದೇಶನ ನೀಡಿದೆ.