ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ್ ಪರ ಜನ ತೀರ್ಪು ನೀಡಿದ್ದರು. ಆದ್ರೆ ಚುನಾವಣಾ ಆಯೋಗ ನೀಡಿದ ಫಲಿತಾಂಶ ಎನ್‌ಡಿಎ ಪರವಾಗಿ ಬಂದಿದೆ. ಈ ರೀತಿ ಹಿಂದೆಂದೂ ನಡೆದಿರಲಿಲ್ಲ ಎಂದು ಮಹಾಘಟಬಂಧನ್ ಸಿಎಂ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಮಹಾಘಟಬಂಧನ್ ಪರ ಇದ್ದ ತೀರ್ಪನ್ನು ಆಯೋಗ ಎನ್‌ಡಿಎ ಪರ ಮಾಡಿದೆ- ತೇಜಸ್ವಿ ಯಾದವ್ ಆರೋಪ - ತೇಜಸ್ವಿ ಯಾದವ್
ಬಿಹಾರದಲ್ಲಿ ಮಹಾಘಟಬಂಧನ್ ಪರ ಜನರ ತೀರ್ಪು ಇತ್ತು. ಆದ್ರೆ ಚುನಾವಣಾ ಆಯೋಗದ ಫಲಿತಾಂಶ ಎನ್‌ಡಿಎ ಪರವಾಗಿ ಬಂದಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.
ಪಾಟ್ನಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, 2015ರಲ್ಲಿ ಮಹಾಘಟಬಂಧನ್ ರಚಿಸಲಾಗಿತ್ತು. ಮತದಾರರು ನಮ್ಮ ಪರವಾಗಿಯೇ ಇದ್ದರು. ಆದರೆ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುತ್ತಿದೆ ಎಂದು ದೂರಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಸಿಎಂ ನಿತೀಶ್ ಕುಮಾರ್ ಹೇಳಿದ್ದರು. ಆದರೆ, ಇದ್ಯಾವುದನ್ನೂ ಪಾಲಿಸುತ್ತಿಲ್ಲ. ನೈತಿಕತೆ ಇದ್ದರೆ ಮೊದಲು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಜನರು ನೀಡಿದ ತೀರ್ಪನ್ನು ಗೌರವಿಸ ಬೇಕು ಎಂದು ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರನ್ನ ಒತ್ತಾಯಿಸಿದ್ದಾರೆ.