ಕರ್ನಾಟಕ

karnataka

ETV Bharat / bharat

ಶಬರಿಮಲೆಯಲ್ಲಿ ಮಂಡಲ ಪೂಜೆ : 41 ದಿನಗಳ ಅಯ್ಯಪ್ಪಸ್ವಾಮಿ ದರ್ಶನ ಸಮಾಪ್ತಿ - ಅಯ್ಯಪ್ಪಸ್ವಾಮಿ ದರ್ಶನ ಸಮಾಪ್ತಿ

ನವೆಂಬರ್ 16ಕ್ಕೆ ತೆರೆದಿದ್ದ ದೇವಾಲಯ ಭಾನುವಾರ 9 ಗಂಟೆಗೆ ಮುಚ್ಚಲಿದೆ. ಜನವರಿ 14ರಂದು ಸಂಕ್ರಾಂತಿ ಹಬ್ಬ ನಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 30ರಂದು ಪುನಾರಂಭವಾಗಲಿದೆ..

Mandala puja held at Sabarimala
ಶಬರಿಮಲೆಯಲ್ಲಿ ಮಂಡಲ ಪೂಜೆ: 41 ದಿನಗಳ ಅಯ್ಯಪ್ಪಸ್ವಾಮಿ ದರ್ಶನ ಸಮಾಪ್ತಿ

By

Published : Dec 26, 2021, 5:07 PM IST

ಶಬರಿಮಲೆ, ಕೇರಳ :ಈ ಬಾರಿ ಶಬರಿಮಲೆಗೆ ಆಗಮಿಸಿ ಲಕ್ಷಾಂತರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ. ಸುಮಾರು 41 ದಿನಗಳ ಕಾಲ ನಡೆದ ಅಯ್ಯಪ್ಪಸ್ವಾಮಿ ದರ್ಶನ ಭಾನುವಾರಕ್ಕೆ ಸಮಾಪ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮಂಡಲಪೂಜೆ ನೆರವೇರಿಸಲಾಗಿದೆ.

ಕೋವಿಡ್ ಮಾರ್ಗಸೂಚಿಗಳ ಅನ್ವಯ ಮಂಡಲ ಪೂಜೆ ನಡೆದಿದೆ. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತ ಸ್ತೋಮ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಅನೇಕ ಆಚಾರಗಳನ್ನು ಪೂರೈಸಲಾಗಿದೆ. ವಿಶೇಷ ಪೂಜೆಯ ಜೊತೆಗೆ 'ಕಲಭ ಅಭಿಷೇಕಂ' ಮತ್ತು 'ಕಲಶ ಅಭಿಷೇಕಂ' ನೆರವೇರಿಸಲಾಗಿದೆ.

ಮಂಡಲ ಪೂಜೆಯ ವೇಳೆ 'ಥಂಕಾ ಅಂಕಿ' ಪೆಟ್ಟಿಗೆಯಲ್ಲಿ ಎಂಬ ಚಿನ್ನದ ಅಭರಣಗಳಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕಾರ ಮಾಡಲಾಗಿತ್ತು. ಇದನ್ನೂ ಭಕ್ತರು ಕಣ್ತುಂಬಿಕೊಂಡರು.

ಈ ಥಂಕಾ ಅಂಕಿಯಲ್ಲಿ ಸುಮಾರು 453 ಸವರನ್ ತೂಕದ ಚಿನ್ನಾಭರಣವಿದೆ. 1970ರಲ್ಲಿ ತಿರುವಂಕೂರು ರಾಜಮನೆತನದ ರಾಜರು ಅಯ್ಯಪ್ಪನಿಗೆ ಕೊಡುಗೆಯಾಗಿ ನೀಡಿದ್ದರು.

ನವೆಂಬರ್ 16ಕ್ಕೆ ತೆರೆದಿದ್ದ ದೇವಾಲಯ ಭಾನುವಾರ 9 ಗಂಟೆಗೆ ಮುಚ್ಚಲಿದೆ. ಜನವರಿ 14ರಂದು ಸಂಕ್ರಾಂತಿ ಹಬ್ಬ ನಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 30ರಂದು ಪುನಾರಂಭವಾಗಲಿದೆ.

ಇದನ್ನೂ ಓದಿ:ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅವೈಜ್ಞಾನಿಕ: ಏಮ್ಸ್​​ನ ಹಿರಿಯ ತಜ್ಞ

ABOUT THE AUTHOR

...view details