ಕರ್ನಾಟಕ

karnataka

ETV Bharat / bharat

ಭಾರೀ ಹಿಮಪಾತ: ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಂದ್..!

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಮುಂದೆ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಚಾರಕ್ಕೆ ಅನುಮತಿಸಲಾಗುತ್ತದೆ.

By

Published : Dec 5, 2020, 9:55 PM IST

Manali Leh road closed in wake of heavy snowfall
ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಂದ್

ಲೇಹ್ (ಹಿಮಾಚಲ ಪ್ರದೇಶ):ಭಾರೀ ಹಿಮಪಾತದ ಹಿನ್ನೆಲೆ ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಲೇಹ್ ಜಿಲ್ಲಾಧಿಕಾರಿ ಸಚಿನ್ ಕುಮಾರ್ ತಿಳಿಸಿದ್ದಾರೆ.

ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ನಾಲ್ಕು ಬಾರಿ ಹಿಮವನ್ನು ತೆರವುಗೊಳಿಸಲಾಗಿದ್ದು, ಆದರೆ ನವೆಂಬರ್ 23 ರಿಂದ 26 ರವರೆಗೆ ಭಾರಿ ಹಿಮಪಾತವಾಗಿದ್ದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮನಾಲಿ-ಲೇಹ್ ಹೆದ್ದಾರಿಯಲ್ಲಿರುವ ದಾರ್ಚಾ ಮತ್ತು ಸರ್ಚುವಿನಲ್ಲಿ 30 ರಿಂದ 50 ಅಡಿ ದಪ್ಪದ ಹಿಮವನ್ನು ಬೀಳುತ್ತದೆ. ತಾಪಮಾನವು ಸಾಮಾನ್ಯವಾಗಿ -20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಆದ್ದರಿಂದ ಸ್ಥಳೀಯ ಆಡಳಿತವು ಎಚ್ಚರಿಕೆಯನ್ನು ನೀಡಿದ್ದು, ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಮತ್ತು ನದಿಗಳ ಬಳಿ ಹೋಗದಂತೆ ಸ್ಥಳೀಯರಿಗೆ ವಿನಂತಿಸಲಾಗಿದೆ..

ವಿಪರೀತ ಕೆಟ್ಟ ಹವಾಮಾನ, ಹಿಮಪಾತ, ತೀವ್ರ ಶೀತ ಮತ್ತು ಜಾರು ರಸ್ತೆಯಿಂದಾಗಿ ಲೇಹ್-ಮನಾಲಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಚಾರಕ್ಕೆ ಅನುಮತಿಸಲಾಗುತ್ತದೆ.

ABOUT THE AUTHOR

...view details