ಮಲಪ್ಪುರಂ (ಕೇರಳ): ಪೇಟಿಎಂ ಖಾತೆಯನ್ನೇ ಹೊಂದಿರದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 20 ಸಾವಿರ ರೂ. ಕಡಿತವಾಗಿದೆ. ತನ್ನ ಬಳಿ ಪೇಟಿಎಂ ಖಾತೆ ಇಲ್ಲದೇ ಇದ್ದರೂ ಪೇಟಿಎಂ ಮೂಲಕ ಹಣ ವಿತ್ಡ್ರಾ ಮಾಡಲಾಗಿದೆ ಎಂದು ತೋರಿಸಿದೆ. ಈ ವಿಚಿತ್ರ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ವಾಣಿಯಂಬಲಂ ಬಳಿಯ ವಂಡೂರಿನ ನಿವಾಸಿ ಅನೀಸ್ ರೆಹಮಾನ್ 20 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇದೀಗ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಣ ಕಡಿತವಾಗಿದ್ದು ಹೇಗೆ?: ತಮ್ಮ ಖಾತೆಯಲ್ಲಿ ಹಣ ಕಡಿತವಾದ ಬಗ್ಗೆ ಅನೀಸ್ ಬ್ಯಾಂಕ್ನವರನ್ನು ಸಂಪರ್ಕಿಸಿದ್ದಾರೆ. ಅಂತೆಯೇ, ಬ್ಯಾಂಕ್ ಅಧಿಕಾರಿಗಳು ಈತನ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಆಗ ಮೂರು ಬಾರಿ ಪೇಟಿಎಂ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂಬುದಾಗಿ ಅನೀಸ್ಗೆ ತಿಳಿಸಿದ್ದಾರೆ. ಆಗ ಅನೀಸ್ ನಾನು ಪೇಟಿಎಂ ಖಾತೆಯನ್ನೇ ಹೊಂದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಅಧಿಕಾರಿಗಳು ಈ ರೀತಿಯ ದೂರು ಮೊದಲ ಬಾರಿಗೆ ನಮ್ಮ ಬಳಿಗೆ ಬಂದಿದೆ. ಸಾಮಾನ್ಯವಾಗಿ ಯುಪಿಐ ಪಾವತಿ ಮತ್ತು ಅವರ ಸಮಸ್ಯೆಗಳನ್ನು ಬ್ಯಾಂಕ್‌ನ ಐಟಿ ವಿಭಾಗದಿಂದ ಪರಿಶೀಲಿಸಿ ಪರಿಹರಿಸಲಾಗುತ್ತದೆ. ತಾಂತ್ರಿಕ ಕಾರಣಗಳಿಂದ ಹಣ ಕಳೆದುಕೊಂಡರೆ ವಾರದೊಳಗೆ ಖಾತೆಗೆ ಮರು ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಈ ಪ್ರಕರಣದ ಸೈಬರ್ ಕಳ್ಳರ ಕೈವಾಡದಂತಿದೆ. ಈ ಬಗ್ಗೆ ಪೊಲೀಸ್ ಸಹ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಜೂನ್1 ರಿಂದ ಥರ್ಡ್ ಪಾರ್ಟಿ ಮೋಟಾರು ವಾಹನ ವಿಮಾ ಕಂತು ಹೆಚ್ಚಳ