ಪ್ರಕಾಶಂ (ಆಂಧ್ರಪ್ರದೇಶ): ತಿಂಗಳ ಹಿಂದೆಯೇ ಸತ್ತಿದ್ದಾನೆ ಎಂದು ಭಾವಿಸಿ, ಅಂತ್ಯಕ್ರಿಯೆಯನ್ನೂ ಮಾಡಿದ್ದ ವ್ಯಕ್ತಿಯೊಬ್ಬರು ಮನೆಗೆ ಹಿಂದಿರುಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಇಲ್ಲಿನ ಗಿಡ್ಡಲೂರು ಮಂಡಲದ ಮುಂಡ್ಲಪಾಡು ಗ್ರಾಮದ ನಿವಾಸಿ ಸೈದುಮಿಯ್ಯ ಎಂಬ ವ್ಯಕ್ತಿಯೇ ದಿಢೀರ್ ಆಗಿ ಪ್ರತ್ಯಕ್ಷವಾಗಿ ಕುಟುಂಬಸ್ಥರನ್ನೇ ತಬ್ಬಿಬ್ಬಾಗಿಸಿದ್ದಾರೆ. 35 ದಿನಗಳ ಹಿಂದೆ ಮಾರ್ಕಪುರಂ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೃತ ವ್ಯಕ್ತಿ ಹಾಗೂ ಸೈದುಮಿಯ್ಯ ನಡುವೆ ಸಾಮ್ಯತೆ ಇತ್ತು. ಇದನ್ನೇ ತಪ್ಪಾಗಿ ಭಾವಿಸಿದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವವನ್ನು ತಂದು ಅಂತಿಮ ಸಂಸ್ಕಾರ ನಡೆಸಿದ್ದರು.