ಕರ್ನಾಟಕ

karnataka

ETV Bharat / bharat

ವಿಷಸರ್ಪದಿಂದ ಕಚ್ಚಿಸಿ ಹೆಂಡತಿ ಕೊಲೆ ಪ್ರಕರಣ.. ಗಂಡನೇ ಆರೋಪಿ, ನಾಳೆ ಶಿಕ್ಷೆ ಪ್ರಕಟ! - ವಿಷಸರ್ಪದಿಂದ ಕಚ್ಚಿಸಿ ಹೆಂಡತಿ ಕೊಲೆ ಪ್ರಕರಣ

ವಿಷಸರ್ಪ ಬಳಕೆ ಮಾಡಿಕೊಂಡು ಹೆಂಡತಿ ಕೊಲೆ ಮಾಡಿದ ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್ ತೀರ್ಪು ನಾಳೆಗೆ ಕಾಯ್ದಿರಿಸಿದ್ದು, ಕೃತ್ಯ ಎಸಗಿರುವ ಗಂಡನೇ ಆರೋಪಿ ಎಂದು ಹೇಳಿದೆ.

Man who used a snake to kill his wife
Man who used a snake to kill his wife

By

Published : Oct 11, 2021, 2:58 PM IST

ಕೋಲಂ(ಕೇರಳ):ವಿಷ ಸರ್ಪದಿಂದ ಕಚ್ಚಿಸಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಗಂಡನೇ ಆರೋಪಿ ಎಂದು ಹೇಳಿದ್ದು, ಇದರ ಶಿಕ್ಷೆ ನಾಳೆ ಪ್ರಕಟ ಮಾಡುವ ಸಾಧ್ಯತೆ ಇದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಸೂರಜ್​ ಎಂಬಾತ 10 ಸಾವಿರ ರೂ. ನೀಡಿ ಎರಡು ಹಾವು ಖರೀದಿ ಮಾಡಿದ್ದನು. ಅವುಗಳ ಸಹಾಯದಿಂದ ಹೆಂಡತಿಯನ್ನ ಕಚ್ಚಿಸಿ, ಕೊಲೆ ಮಾಡಿದ್ದನು. ಇದಾದ ಬಳಿಕ ಹಾವು ಕಚ್ಚಿದ್ದರಿಂದ ತನ್ನ ಹೆಂಡತಿ ಸಾವನ್ನಪ್ಪಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದನು. ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಾನೇ ಈ ಕೃತ್ಯವೆಸಗಿದ್ದಾಗಿ ತಿಳಿಸಿದ್ದನು. ಹೀಗಾಗಿ ಸೂರಜ್​ ವಿರುದ್ಧ ಸೆಕ್ಷನ್​​ 302(ಕೊಲೆ),326,307 ಹಾಗೂ 201ರ ಅಡಿ ದೂರು ದಾಖಲಾಗಿತ್ತು.

ಪೊಲೀಸರು ಜಿಲ್ಲಾ ಸೆಷನ್ಸ್​​ ಕೋರ್ಟ್​ಗೆ ಚಾರ್ಜ್​ಶಿಟ್​​ ಸಲ್ಲಿಕೆ ಮಾಡಿದ್ದರು. ಈ ವೇಳೆ, ಆರೋಪಿಗೆ ಮರಣದಂಡನೆ ವಿಧಿಸುವಂತೆ ಮಹಿಳೆಯ ಪೋಷಕರು ಒತ್ತಾಯ ಮಾಡಿದ್ದರು. ಇದೀಗ ವಾದ - ಪ್ರತಿವಾದ ಆಲಿಸಿರುವ ಕೋರ್ಟ್​ ಗಂಡನೇ ಆರೋಪಿ ಎಂದು ಹೇಳಿದ್ದು, ಆತನಿಂದಲೇ ಈ ಕೃತ್ಯನಡೆದಿರುವ ಕಾರಣ ನಾಳೆ ಶಿಕ್ಷೆ ಪ್ರಕಟಿಸಲಿದೆ.

ಇದನ್ನೂ ಓದಿರಿ:ಸಮ್ಮತಿಯ ವಿವಾಹಪೂರ್ವ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ: ಚಾಮರಾಜನಗರ ಕೋರ್ಟ್ ಆದೇಶ

ಹಾವು ಕಚ್ಚಿದ್ದರಿಂದ ಸೂರಜ್​​ ಪತ್ನಿ ಉತ್ರಾ ಕಳೆದ ವರ್ಷ 7ರಂದು ಸಾವನ್ನಪ್ಪಿದ್ದಳು. ಇದಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಗಂಡ ಒಪ್ಪಿಕೊಂಡಿದ್ದನು. ಜೊತೆಗೆ 10 ಸಾವಿರ ರೂ. ನೀಡಿ 2 ಹಾವು ಖರೀದಿ ಮಾಡಿದ್ದಾಗಿ ತಿಳಿಸಿದ್ದನು.

ABOUT THE AUTHOR

...view details