ಚೆನ್ನೈ(ತಮಿಳುನಾಡು):ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಗೆದ್ದರೆ, ಪ್ರಾಣತ್ಯಾಗ ಮಾಡುವುದಾಗಿ ಹರಕೆ ಹೊತ್ತಿದ್ದ ವ್ಯಕ್ತಿ, ಇಂದು ಹರಕೆ ಪೂರೈಸಿದ ವಿಚಿತ್ರ ಘಟನೆ ತಮಿಳುನಾಡಿನ ಕರೂರ್ ಎಂಬಲ್ಲಿ ನಡೆದಿದೆ.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಗೆಲ್ಲಬೇಕೆಂದು ಕರೂರ್ನ ಲಾಲ್ಪೇಟ್ ಪ್ರದೇಶದ ವಾಸವಿದ್ದ ಉಲಕನಾಥನ್ (60) ಹರಕೆ ಹೊತ್ತಿದ್ದ. ಈತ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿಯೂ ಹೌದು.
ಈಗ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದು, ಸ್ಟಾಲಿನ್ ಅಧಿಕಾರ ಸ್ವೀಕರಿಸಿದ ನಂತರ ಉಲಕನಾಥನ್ ಇಂದು ಹರಕೆ ತೀರಿಸುವ ಸಲುವಾಗಿ ಪುದು ಕಾಳಿಯಮ್ಮನ್ ದೇವಾಲಯಕ್ಕೆ ತೆರಳಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ದೇವಾಲಯದ ಸಿಬ್ಬಂದಿ ಬೆಂಕಿ ಆರಿಸಲು ಯತ್ನಿಸಿದ್ದು, ಆದರೆ ಸ್ಥಳದಲ್ಲೇ ಉಲಕನಾಥನ್ ಸಾವನ್ನಪ್ಪಿದ್ದು, ದೇಹ ಸುಟ್ಟು ಕರಕಲಾಗಿದೆ. ವಂಗಲ್ ಪೊಲೀಸರು ಸ್ಥಳಕ್ಕ ಧಾವಿಸಿ, ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಒಂದು ಪತ್ರ ದೊರೆತಿದೆ.