ಗುವಾಹಟಿ(ಅಸ್ಸೋಂ):ಬೀದಿ ನಾಟಕದಲ್ಲಿ ಶಿವನ ಪಾತ್ರ ಮಾಡಿದ್ದ ವ್ಯಕ್ತಿಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿದೆ. ಶಿವ ಹಾಗೂ ಪಾರ್ವತಿ ವೇಷ ಧರಿಸಿಕೊಂಡು ಅಸ್ಸೋಂನ ನಾಗಾಂವ್ ಪಟ್ಟಣದ ಬೀದಿಗಳಲ್ಲಿ ಅದರಲ್ಲೂ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ನುಕ್ಕಡ್ ನಾಟಕ ಪ್ರದರ್ಶಿಸುತ್ತ ಬೆಲೆ ಏರಿಕೆ ಮತ್ತು ಹಣದುಬ್ಬರದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು. ಪರಿಣಾಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ಶಿವನ ವೇಷ ಧರಿಸಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದರಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಶಂಕಿತ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಸದರ್ ಪಿಎಸ್ ಪ್ರಭಾರಿ ಮನೋಜ್ ರಾಜವಂಶಿ ಮಾಹಿತಿ ನೀಡಿದ್ದಾರೆ.