ಗುಂಟೂರು(ಆಂಧ್ರಪ್ರದೇಶ): ಆಸ್ತಿ ವಿಚಾರವಾಗಿ ವ್ಯಕ್ತಿಯೋರ್ವ ಹೆತ್ತ ತಾಯಿಯನ್ನು ಕ್ರೂರವಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಡೆದಿದ್ದು, ಈ ಹಲ್ಲೆಗೆ ಪತ್ನಿಯೂ ಸಾಥ್ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಮಗನೋ.. ರಾಕ್ಷಸನೋ.. ಹೆತ್ತ ತಾಯಿಯನ್ನೇ ಕ್ರೂರವಾಗಿ ಥಳಿಸಿದ ಮಗ.. ವಿಡಿಯೋ - ಗುಂಟೂರಿನಲ್ಲಿ ತಾಯಿಯನ್ನು ಥಳಿಸಿದ ಮಗ
ವ್ಯಕ್ತಿಯೋರ್ವ ಹೆತ್ತ ತಾಯಿಯನ್ನು ಕ್ರೂರವಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ಮಹಿಳೆಯನ್ನು ರಕ್ಷಿಸಿದ್ದಾರೆ.
ಹೆತ್ತ ತಾಯಿಯನ್ನೇ ಕ್ರೂರವಾಗಿ ಥಳಿಸಿದ ಮಗ.. ವಿಡಿಯೋ
ಶೆಹು ಎಂಬಾತ ಆಸ್ತಿ ವಿಚಾರವಾಗಿ ಹೆತ್ತ ತಾಯಿಯನ್ನು ಥಳಿಸಿದ್ದಾನೆ. ಇದನ್ನು ಕಂಡ ನೆರೆಹೊರೆಯವರು ಮೊಬೈಲ್ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, ಈ ದೃಶ್ಯಗಳ ಆಧಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕ ಧಾವಿಸಿ, ವೃದ್ಧೆಯನ್ನು ರಕ್ಷಿಸಿ, ಆಕೆಯ ಮಗನನ್ನು ಬಂಧಿಸಿದ್ದಾರೆ.
Last Updated : Feb 19, 2022, 1:37 PM IST