ಕರ್ನಾಟಕ

karnataka

ETV Bharat / bharat

ಬೋಗಸ್ ಷೇರು ಮಾರಾಟ: 28 ವರ್ಷ ತಲೆಮರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಸೆರೆ!

ವಂಚನೆ ಪ್ರಕರಣವೊಂದರಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

By

Published : Mar 22, 2023, 9:29 AM IST

ಮುಂಬೈ (ಮಹಾರಾಷ್ಟ್ರ):ವಂಚನೆ ಪ್ರಕರಣವೊಂದರಲ್ಲಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆತನನ್ನು ಬಲೆಗೆ ಬೀಳಿಸುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಉದ್ಯಮ (ಬೆಸ್ಟ್) ಸಂಸ್ಥೆ ನೌಕರರಂತೆ ವೇಷ ಬದಲಿಸಿದ್ದರು.

ವೀರೇಂದ್ರ ಸಾಂಘ್ವಿ ಅಲಿಯಾಸ್ ಮಹೇಶ್ ಶಾ ಬಂಧಿತ ಆರೋಪಿ. ಈತ 1995ರಲ್ಲಿ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿತ್ತು. 20 ಲಕ್ಷದ ಬೋಗಸ್ ಷೇರುಗಳನ್ನು ಮಾರಾಟ ಮಾಡಿದ ಆರೋಪ ಆತನ ಮೇಲಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಮೀನು ಪಡೆದ ಬಳಿಕ ಆತ ನಾಪತ್ತೆಯಾಗಿದ್ದ. ಇತ್ತೀಚೆಗೆ ಆರೋಪಿ ದನಾ ಬಂದರ್ ಪ್ರದೇಶದ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ವಿದ್ಯುತ್ ಬಿಲ್ ಪರಿಶೀಲನೆ ನೆಪದಲ್ಲಿ ಸಿವಿಕ್ ಬಾಡಿ ಬೆಸ್ಟ್​​ನ ನೌಕರನಂತೆ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದ್ದಾರೆ. ಆರೋಪಿ ನಿಗದಿತ ಸ್ಥಳಕ್ಕೆ ಬಂದಾಗ ಬಂಧಿಸಲಾಯಿತು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಕಚೇರಿ ಅಧಿಕಾರಿ ಎಂದು ಸುಳ್ಳು ಹೇಳಿ ಬುಲೆಟ್‌ ಪ್ರೂಫ್‌ ವಾಹನ, ಭದ್ರತೆ ಪಡೆದ ಗುಜರಾತ್‌ ವ್ಯಕ್ತಿ ಸೆರೆ!

ಪಿಎಂಒ ಅಧಿಕಾರಿ ಎಂದು ವಂಚನೆ:ಪ್ರಧಾನಿ ಮಂತ್ರಿ ಕಾರ್ಯಾಲಯದ(PMO) ಉನ್ನತ ಮಟ್ಟದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಪಂಚತಾರಾ ಹೊಟೇಲ್‌ನಲ್ಲಿ ಆತಿಥ್ಯದ ಜತೆಗೆ ವಿಶೇಷ ಭದ್ರತೆ ಹಾಗು ಬುಲೆಟ್‌ ಪ್ರೂಫ್ ವಾಹನವನ್ನೂ ಪಡೆದ ಗಂಭೀರ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯನ್ನು ಇತ್ತೀಚೆಗೆ ಶ್ರೀನಗರ ಪೊಲೀಸರು ಬಂಧಿಸಿದ್ದರು. ಇಲ್ಲಿನ ಪಂಚತಾರಾ ಹೊಟೇಲ್‌ನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದ. ಕಿರಣ್ ಪಟೇಲ್ ಬಂಧಿತ ವ್ಯಕ್ತಿ.

ಪೊಲೀಸ್ ಮೂಲಗಳ ಪ್ರಕಾರ, ಈತ ಕಾಶ್ಮೀರ ಕಣಿವೆಗೆ 3ನೇ ಭೇಟಿಯಲ್ಲಿದ್ದ. ಮಾರ್ಚ್ 3ರಂದು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಸೇಬಿನ ತೋಟಗಳಿಗೆ ಖರೀದಿದಾರರನ್ನು ಗುರುತಿಸಲು ಕೇಂದ್ರ ಸರ್ಕಾರ ತನಗೆ ಆದೇಶ ನೀಡಿದೆ ಎಂದು ಪಟೇಲ್ ಹೇಳಿಕೊಂಡಿದ್ದ. ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನೂ ಹೇಳಿಕೊಂಡು ಓಡಾಡುತ್ತಿದ್ದ. ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆಗಾಗಿ ಆರೋಪಿಯನ್ನು ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಾರ್ಚ್ 2 ರಂದು ವಂಚನೆ ಮತ್ತು ಪೋರ್ಜರಿ ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮರುದಿನ ಬಂಧಿಸಲಾಗಿತ್ತು.

ಅಧಿಕಾರಿಗಳ ವಿರುದ್ಧ ಕ್ರಮ:ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ)ದ ಉನ್ನತ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಸರ್ಕಾರಿ ಸೌಲಭ್ಯ ಪಡೆದಿದ್ದ ಗುಜರಾತ್​ನ ವಂಚಕ ಕಿರಣ್​ ಪಟೇಲ್​ ಪ್ರಕರಣಕ್ಕೆ ಸಂಬಂಧಿದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ವಾರ ಬಂಧಿತನಾದ ಕಿರಣ್ ಪಟೇಲ್‌ಗೆ ಅನುಚಿತ ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವುದಾಗಿ ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ ಪ್ರಕರಣ: ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ

ABOUT THE AUTHOR

...view details