ಮೆಹಬೂಬ್ನಗರ(ತೆಲಂಗಾಣ):ದೇಶಾದ್ಯಂತ ಮಹಾಮಾರಿ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಕೂಡ ಸಾವಿರಾರು ಜನರು ಮಾಸ್ಕ್ ಧರಿಸಿಕೊಳ್ಳದೇ ಓಡಾಡುತ್ತಿರುವ ದೃಶ್ಯ ಮೇಲಿಂದ ಮೇಲೆ ಕಂಡು ಬರುತ್ತವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾಸ್ಕ್ ಖರೀದಿಗೆ ಹಣವಿಲ್ಲದಿದ್ದರೂ, ಪಕ್ಷಿಯ ಗೂಡು ಧರಿಸಿಕೊಂಡು ಸರ್ಕಾರಿ ಕಚೇರಿಗೆ ಆಗಮಿಸಿ ಎಲ್ಲರಿಂದಲೂ ಶ್ಲಾಘನೆಗೊಳಗಾಗಿದ್ದಾರೆ.
ತೆಲಂಗಾಣದ ಮೆಹಬೂಬ್ನಗರದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬಸರ್ಕಾರಿ ಕಚೇರಿಗೆ ಮಾಸ್ಕ್ ಬದಲಿಗೆ ಪಕ್ಷಿಗಳ ಗೂಡು ಧರಿಸಿ ಆಗಮಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೆಚ್ಚು ವೈರಲ್ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಮುಖವಾಡ ಖರೀದಿ ಮಾಡಲು ಸಾಧ್ಯವಾಗದ ಕಾರಣ ಆತ ಈ ರೀತಿಯಾಗಿ ನಡೆದುಕೊಂಡಿದ್ದಾನೆ.