ಕಣ್ಣೂರು(ಕೇರಳ):ಕುಡಿದ ಅಮಲಿನಲ್ಲಿ ಸೂಪರ್ ಮಾರ್ಕೆಟ್ನೊಳಗೆ ಹೋಗಿರುವ ವ್ಯಕ್ತಿಯೊಬ್ಬ ಕೊಡಲಿಯಿಂದ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಧ್ವಂಸಗೊಳಿಸಿದ್ದಾನೆ. ಕೇರಳದ ಕಣ್ಣೂರಿನ ಪೆರಿಂಗತ್ತೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ರಾತ್ರಿ ವೇಳೆ ಕೈಯಲ್ಲಿ ಕೊಡಲಿ ಹಿಡಿದು ಸೂಪರ್ ಮಾರ್ಕೆಟ್‌ನ ಒಳಗೆ ಹೋಗಿರುವ ವ್ಯಕ್ತಿ ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲಾ ಒಡೆದು ಹಾಕಿದ್ದಾನೆ. ಗಾಜಿನ ಕೌಂಟರ್ ಸಂಪೂರ್ಣವಾಗಿ ನಾಶಪಡಿಸಿದ್ದಾನೆ. ತದನಂತರ ವಸ್ತುಗಳನ್ನು ಇಡಲಾಗಿದ್ದ ಕೆಲವೊಂದು ರಾಕ್ ಕೂಡ ನಾಶ ಮಾಡಿದ್ದಾನೆ. ಇದರ ಜೊತೆಗೆ ರೆಫ್ರಿಜರೇಟರ್ನ ಬಾಗಿಲು ಒಡೆದು ಅದರಿಂದ ಚಾಕಲೇಟ್‌ಗಳನ್ನು ತೆಗೆದುಕೊಂಡು ಹೋಗಿದ್ದಾನೆ.