ಶಹಜಹಾನ್‌ಪುರ (ಉತ್ತರ ಪ್ರದೇಶ): ಕಳ್ಳತನದ ಅನುಮಾನದ ಮೇರೆಗೆ 33 ವರ್ಷದ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಶಾಕ್ ನೀಡಿ ಥಳಿಸಿದ್ದರಿಂದ ಆತ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಶಿವಂ ಜೋಹ್ರಿ ಎಂಬಾತನನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಕಂಬಕ್ಕೆ ಕಟ್ಟಿಹಾಕಿದ್ದು, ಆತ ನೋವಿನಿಂದ ನರಳುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದೆ.
ಸರ್ಕಲ್ ಆಫೀಸರ್ (ನಗರ) ಬಿ.ಎಸ್.ವೀರ್ ಪ್ರಕಾರ, ಜೋಹ್ರಿ ಸೂರಿ ಟ್ರಾನ್ಸ್‌ಪೋರ್ಟ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಯ ಮಾಲೀಕ ನೀರಜ್ ಗುಪ್ತಾ ಅವರ ಮೇಲೆ ಕಳ್ಳತನದ ಆರೋಪ ಮಾಡಿ ಕುನಾಲ್ ಅರೋರಾ ಅವರ ಬಟ್ಟೆ ಕಂಪನಿಗೆ ಕರೆದೊಯ್ದಿದ್ದಾರೆ. ಅಲ್ಲಿ ಜೋಹ್ರಿ ಅವರನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದೆ. ಆ ನಂತರ ಅಂಗಿಯನ್ನು ತೆಗೆದುಹಾಕಿ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಗುಪ್ತಾ, ಅರೋರಾ ಮತ್ತು ಇತರ ಆರು ಮಂದಿ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಬಿಸಿ ಇಂಡಿಯಾ ವಿರುದ್ಧ ಫೆಮಾ ಕಾಯ್ದೆಯಡಿ ಕೇಸ್ ದಾಖಲಿಸಿದ ಇಡಿ