ಕರ್ನಾಟಕ

karnataka

ETV Bharat / bharat

ಕಾಡಿದ ಅಪರೂಪದ ಕಾಯಿಲೆ: 24 ವರ್ಷಗಳಿಂದ ಬರೇ ಎಳನೀರನ್ನೇ ಸೇವಿಸಿ ಬದುಕುವ ವೃದ್ಧ - 24 ವರ್ಷಗಳಿಂದ ಏಳನೀರು ಸೇವನೆ

ಅಪರೂಪದ ಕಾಯಿಲೆಗೊಳಗಾಗಿದ್ದ ವ್ಯಕ್ತಿಯೋರ್ವ ಕಳೆದ 24 ವರ್ಷಗಳಿಂದ ಕೇವಲ ಎಳನೀರನ್ನೇ ಸೇವಸಿ ಜೀವನ ನಡೆಸುತ್ತಿದ್ದಾರೆ.

Man survives only on tender coconuts
Man survives only on tender coconuts

By

Published : Jan 17, 2022, 7:32 PM IST

Updated : Jan 17, 2022, 7:56 PM IST

ಕಾಸರಗೋಡು(ಕೇರಳ):ಕೇರಳದ ಕಾಸರಗೋಡಿನಲ್ಲಿ ವೃದ್ಧನೋರ್ವ ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಕೇವಲ ಎಳನೀರು ಕುಡಿದೇ ಬದುಕು ಸಾಗಿಸುತ್ತಿದ್ದಾರೆ.

ಕಾಸರಗೋಡಿನ ಬಾಲಕೃಷ್ಣನ್​ ಪಳಾಯಿ ಎಂಬವರು ಕೇರಳ ತೆಂಗು ಮಂಡಳಿಯ ಬ್ರಾಂಡ್ ಅಂಬಾಸಿಡರ್. ಇದೀಗ ತಮ್ಮ ​​​63ನೇ ವಯಸ್ಸಿನಲ್ಲಿ ಆರೋಗ್ಯಕರ ಜೀವನ ನಡೆಸುತ್ತಿರುವ ಇವರು, ಫಿಟ್​​ ಆ್ಯಂಡ್​ ಫೈನ್​ ಆಗಿದ್ದಾರೆ. ಕಳೆದ 24 ವರ್ಷಗಳಿಂದಲೂ ಇವರು ಪ್ರತಿದಿನ ಎರಡು-ಮೂರು ಎಳನೀರು ಮಾತ್ರ ಸೇವನೆ ಮಾಡ್ತಿದ್ದು, ಬೇರೆ ಯಾವುದೇ ಆಹಾರ ಸೇವಿಸುತ್ತಿಲ್ಲ. ಪಿಲಿಕ್ಕೋಡ್​​ನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರತಿದಿನ 25 ರೂ. ನೀಡಿ ಇವುಗಳನ್ನು ಖರೀದಿ ಮಾಡ್ತಾರೆ.

ಎಳನೀರು ಸೇವನೆ ಮಾಡಿ ಜೀವನ ಸಾಗಿಸುತ್ತಿರುವ ವೃದ್ಧ

ಅಪರೂಪದ ಕಾಯಿಲೆ​

ಆಹಾರಪ್ರಿಯರಾಗಿದ್ದ ಬಾಲಕೃಷ್ಣನ್​ ಅವರಿಗೆ ಕಳೆದ 30 ವರ್ಷಗಳ ಹಿಂದೆ ಅಪರೂಪದ ಕಾಯಿಲೆ (food pipe) ಇರುವುದು ಗೊತ್ತಾಗುತ್ತದೆ. ಹೀಗಾಗಿ, ಆಹಾರ ಸೇವನೆ ಮಾಡಿದ ನಂತರ ದೇಹದಲ್ಲಿ ಜೀರ್ಣಕ್ರಿಯೆ ನಿಧಾನವಾಗುವ ಜೊತೆಗೆ ಆಹಾರ ಸೇವನೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೈದ್ಯರು ಎಳನೀರು ಸೇವನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಪ್ರತಿದಿನ ಎಳನೀರು ಸೇವನೆ ಮಾಡ್ತಿದ್ದಾರೆ.

ಇದನ್ನೂ ಓದಿ:ಕೋಳಿ ಅಂಕದ ಜಾಗದಲ್ಲೇ Mobile ATM ಸೇವೆ; ಬ್ಯಾಂಕ್‌ ಸೌಕರ್ಯಕ್ಕೆ ಜೂಜಾಡುವವರು ಖುಷ್‌!

ಕೇರಳದ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಬಾಲಕೃಷ್ಣನ್​ ಅವರು ಕ್ರೀಡಾಪಟುವಾಗಿದ್ದು, 52ನೇ ವಯಸ್ಸಿನಲ್ಲಿ ರಾಷ್ಟ್ರೀಯ ನಾಗರಿಕ ಕ್ರೀಡಾಕೂಟ ಮತ್ತು 2010ರಲ್ಲಿ ಮಲೇಷ್ಯಾದಲ್ಲಿ ನಡೆದ ಮಾಸ್ಟರ್ಸ್​ ಮೀಟ್​​ನಲ್ಲಿ ಭಾಗಿಯಾಗಿ ಪದಕ ಗೆದ್ದಿದ್ದಾರೆ.

ಸದ್ಯ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ತಯಾರಿ ನಡೆಸಿರುವವರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಳನೀರು ಸೇವನೆ ಮಾಡಲು ಆರಂಭಿಸಿದಾಗಿನಿಂದಲೂ ಇವರಿಗೆ ಯಾವುದೇ ರೀತಿಯ ತೊಂದರೆ, ಕಾಯಿಲೆ ಕಾಣಿಸಿಕೊಂಡಿಲ್ಲ.

Last Updated : Jan 17, 2022, 7:56 PM IST

ABOUT THE AUTHOR

...view details