ಕರ್ನಾಟಕ

karnataka

ETV Bharat / bharat

ಸಾಲ ಮರುಪಾವತಿಗೆ ಕಿತ್ತಾಟ: ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ - ಪತಿ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ

ಸಾಲ ಮರುಪಾವತಿ ವಿಚಾರವಾಗಿ ನಡೆದ ಜಗಳದಲ್ಲಿ ಪತಿ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಆಘಾತಕಾರಿ ಘಟನೆ ಬಿಹಾರದಲ್ಲಿ ಇಂದು ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

man-strangulates-wife-to-death
ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

By

Published : Nov 26, 2022, 5:27 PM IST

ಸಹರ್ಸಾ(ಬಿಹಾರ):ಮಾಡಿದ ಸಾಲವನ್ನು ಮರುಪಾವತಿ ಮಾಡಲು ಹೆಂಡತಿ ಕೇಳಿದ್ದಕ್ಕೆ ಕೋಪಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಏನಾಯ್ತು?:ಸಹರ್ಸಾ ಜಿಲ್ಲೆಯ ಪಟ್ಟಿಂಧಾ ಗ್ರಾಮದ ನಿವಾಸಿಗಳಾದ ಮುಲಾಯಂ ಯಾದವ್​, ಲಕ್ಷ್ಮೀದೇವಿ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಕೆಲ ದಿನಗಳಿಂದ ಇಬ್ಬರ ಬಿರುಕು ಹಣದ ವಿಷಯಕ್ಕಾಗಿ ಕಲಹ ಉಂಟಾಗುತ್ತಿತ್ತು.

ಇದರಿಂದ ಬೇಸತ್ತಿದ್ದ ಪತ್ನಿ ಲಕ್ಷ್ಮೀದೇವಿ ತನ್ನ ತಾಯಿಯಿಂದ ಸಾಲವಾಗಿ ಬ್ಯಾಂಕೊಂದರಲ್ಲಿ 2 ಲಕ್ಷ ರೂಪಾಯಿ ಪಡೆದಿದ್ದರು. ಇಷ್ಟು ಮೊತ್ತದ ಹಣ ಪಡೆದಿದ್ದರೂ ಮುಲಾಯಂ ಯಾದವ್​ ಹಣದ ದಾಹ ನೀಗಿರಲಿಲ್ಲ. ಬಳಿಕ ಪತ್ನಿ ಪಡೆದ ಸಾಲವನ್ನು ತೀರಿಸಲು ಕೇಳಿದ್ದಾರೆ. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.

ಇಂದು ಸಾಲ ಮರುಪಾವತಿಗೆ ಮತ್ತೆ ಜಗಳವಾಗಿದ್ದು, ವಾಗ್ವಾದ ವಿಕೋಪಕ್ಕೆ ತಿರುಗಿ ಪತಿರಾಯ, ಲಕ್ಷ್ಮಿದೇವಿಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಭಯದರಿಂದ ಮನೆಯಿಂದ ಪರಾರಿಯಾಗಿದ್ದ. ವಿಷಯ ತಿಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಹಣಕ್ಕಾಗಿ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಜಾಲ ಬೀಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ದಂಪತಿಗೆ 6 ವರ್ಷದ ಮಗಳು ಸೇರಿದಂತೆ ಮೂವರು ಮಕ್ಕಳಿದ್ದಾರೆ.

ಓದಿ:ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ವ್ಯಕ್ತಿ: ಪ್ರಾಣಿ ಹಿಂಸೆ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ

ABOUT THE AUTHOR

...view details