ಸೂರತ್ (ಗುಜರಾತ್):ವಿಚ್ಚೇದನ ಪಡೆದಿದ್ದ ಪತಿ ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಮಾಜಿ ಪತ್ನಿಯನ್ನು ಪಾರ್ಟಿಗೆ ಆಹ್ವಾನಿಸಿ ವಿಷದ ಸೂಜಿ(ಸಿರಿಂಜ್) ಮೂಲಕ ದಾಳಿ ನಡೆಸಿದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಸಿರಿಂಜ್ನಲ್ಲಿ ಯಾವುದಾದರೂ ಮಾರಕ ಅಂಶ ಇತ್ತೇ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
2 ತಿಂಗಳ ಹಿಂದಷ್ಟೇ 15 ವರ್ಷಗಳ ವೈವಾಹಿಕ ಜೀವನಕ್ಕೆ ಇಬ್ಬರೂ ಇತಿಶ್ರೀ ಹಾಡಿದ್ದರು. ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ವ್ಯಕ್ತಿ ಕ್ರಿಸ್ಮಸ್ ಹಬ್ಬದ ವೇಳೆ ಮಾಜಿ ಪತ್ನಿ ಮತ್ತು ಮಕ್ಕಳನ್ನು ಕೂಟಕ್ಕೆ ಆಹ್ವಾನಿಸಿದ್ದಾನೆ. ಎಲ್ಲರೂ ಸೇರಿ ಶಾಪಿಂಗ್ ನಡೆಸಿದ್ದಾರೆ. ಈ ವೇಳೆ, ಮಾಜಿ ಪತಿ, ಮಹಿಳೆಯ ಮೇಲೆ ಸಿರಿಂಜ್ನಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆ.
ಗಾಯಗೊಂಡು ಅಸ್ವಸ್ಥಳಾದ ಮಹಿಳೆ ಕೆಲ ಸಮಯದ ಬಳಿಕ ಸಾವರಿಸಿಕೊಂಡು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅವರನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚೇತರಿಸಿಕೊಂಡ ಬಳಿಕ ಅಧಿಕಾರಿಗಳು ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.