ನವದೆಹಲಿ:ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಚಿತ್ರಪ್ರದರ್ಶನದ ವೇಳೆ ಟಿಕೆಟ್ ಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ದೆಹಲಿಯ ಡಿಲೈಟ್ ಚಿತ್ರಮಂದಿರದ ಬಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಚಾಂದಿನಿ ಮಹಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ದರೋಡೆ, ಮಾದಕ ದ್ರವ್ಯ ಹೊಂದಿದ ಆರೋಪ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಸುಮಾರು 27 ಪ್ರಕರಣಗಳು ಈಗಾಗಲೇ ದಾಖಲಾಗಿವೆ.
ಕೇಂದ್ರ ಜಿಲ್ಲಾ ಡಿಸಿಪಿ ಶ್ವೇತಾ ಚೌಹಾಣ್ ಪ್ರಕಾರ, ಅಜಯ್ ಎಂಬ ಯುವಕ ನವೆಂಬರ್ 28ರ ಸಂಜೆ ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಚಿತ್ರ ವೀಕ್ಷಣೆಗೆ ದೆಹಲಿಯ ಡಿಲೈಟ್ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇದೇ ವೇಳೆ ಚಾಂದಿನಿ ಮಹಲ್ ನಿವಾಸಿ ಸೈಯದ್ ಜಿಯಾವುದ್ದೀನ್ ಅಲಿಯಾಸ್ ಜುಗನು ಕೂಡಾ ಅಲ್ಲಿಗೆ ಆಗಮಿಸಿದ್ದ.