ವಿಶಾಖಪಟ್ಟಣಂ (ಆಂಧ್ರಪ್ರದೇಶ): ನೀಡಿದ್ದ ಹಣ ವಾಪಸ್ ನೀಡುವಂತೆ ಕೇಳಿ ವ್ಯಕ್ತಿಯೊಬ್ಬರನ್ನು ರೌಡಿಶೀಟರ್ ಹಾಗೂ ಮತ್ತೊಬ್ಬ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಅಪ್ಪಲಾ ರೆಡ್ಡಿ ಅಲಿಯಾಸ್ ಅಪ್ಪಣ್ಣ ರೆಡ್ಡಿ ಎಂಬುವವರೇ ಕೊಲೆಯಾದ ವ್ಯಕ್ತಿ. ಅಪ್ಪಾಲಾ ರೆಡ್ಡಿ ರೌಡಿ ಶೀಟರ್ ಶಂಕರ್ ಎಂಬಾತನಿಗೆ 500 ರೂ. ನೀಡಿದ್ದ. ಈ ಹಣ ವಾಪಸ್ ಕೊಡುವಂತೆ ರೌಡಿ ಶೀಟರ್‌ಗೆ ರೆಡ್ಡಿ ಕೇಳಿದ್ದ. ಆದರೆ, ಹಣ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ.
500 ರೂ. ಹಣಕ್ಕಾಗಿ ವ್ಯಕ್ತಿಯ ಕತ್ತು ಸೀಳಿ ಕೊಲೆ: ರೌಡಿಶೀಟರ್ ಸೇರಿ ಇಬ್ಬರಿಂದ ಕೃತ್ಯ ಗುರುವಾರ ರಾತ್ರಿ ಅಪ್ಪಾಲಾ ರೆಡ್ಡಿ ಹಾಗೂ ರೌಡಿ ಶೀಟರ್ ಶಂಕರ್ ಮುಖಾಮುಖಿಯಾಗಿದ್ದರು. ಈ ವೇಳೆ, ಮತ್ತೆ ಹಣ ಕೊಡುವಂತೆ ರೆಡ್ಡಿ ಕೇಳಿದಾಗ ಗಲಾಟೆ ಶುರುವಾಗಿದೆ. ಅಂತೆಯೇ, ಶಂಕರ್ ಮತ್ತು ಆತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಸೇರಿ ಅಪ್ಪಾಲ ರೆಡ್ಡಿ ಮೇಲೆ ಚಾಕುವಿನಿಂದ ದಾಳಿ, ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸವಾರ ಸಮೇತ ದ್ವಿಚಕ್ರ ವಾಹನ ಕ್ರೇನ್ನಲ್ಲಿ ಎತ್ತಿಕೊಂಡು ಹೋದ ಟ್ರಾಫಿಕ್ ಪೊಲೀಸ್.. ವಿಡಿಯೋ