ಕರ್ನಾಟಕ

karnataka

ETV Bharat / bharat

ಇಡುಕ್ಕಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ, ಮತ್ತೊಬ್ಬನ ಸ್ಥಿತಿ ಗಂಭೀರ - ಇಡುಕ್ಕಿ ಗುಂಡಿಕ್ಕಿ ವ್ಯಕ್ತಿ ಹತ್ಯೆ ನ್ಯೂಸ್​

ಗುಂಡು ಹಾರಿಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಮೂಲಮಟ್ಟಂನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Man Shot Dead
Man Shot Dead

By

Published : Mar 27, 2022, 10:23 AM IST

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ಮೂಲಮಟ್ಟಂನಲ್ಲಿ ಗುಂಡು ಹಾರಿಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತನನ್ನು ಕೀರಿತೋಡಿನ ಸನಲ್ ಸಾಬು ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಪ್ರದೀಪ್ ಗಂಭೀರವಾಗಿ ಗಾಯಗೊಂಡು ತೊಡುಪುಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೂಲಮಟ್ಟಂ ಮೂಲದ ಫಿಲಿಪ್ ಮಾರ್ಟಿನ್ ಎಂಬಾತನನ್ನು ಬಂದೂಕುಸಮೇತ ಬಂಧಿಸಲಾಗಿದೆ. ನಿನ್ನೆ ರಾತ್ರಿ 10 ಗಂಟೆಗೆ ಮೂಲಮಟ್ಟಂ ಹೈಸ್ಕೂಲ್ ಎದುರು ಘಟನೆ ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಅಶೋಕ್ ಜಂಕ್ಷನ್‌ನಲ್ಲಿರು ಫುಡ್​ ಕಾರ್ಟ್‌ನಲ್ಲಿ ಫಿಲಿಪ್ ಮಾರ್ಟಿನ್ ವಾಗ್ವಾದ ನಡೆಸಿದ್ದಾನೆ.

ಈ ವೇಳೆ ತನ್ನ ಕಾರಿನಲ್ಲಿದ್ದ ಗನ್​ ತೆಗೆದುಕೊಂಡು ಅಲ್ಲಿ ಗುಂಡಿನ ದಾಳಿ ನಡೆದ್ದಾನೆ. ಅದೃಷ್ಟವಶಾತ್​ ಯಾರಿಗೂ ಗಾಯಗಳಾಗಿಲ್ಲ. ನಂತರ ಸ್ಥಳದಿಂದ ತಪ್ಪಿಸಿಕೊಂಡು ತನ್ನ ಕಾರಿನಲ್ಲಿ ತೊಡುಪುಳ ಕಡೆಗೆ ತೆರಳಿದ್ದಾನೆ.

ದಾರಿಯಲ್ಲಿ ಸನಲ್ ಮತ್ತು ಪ್ರದೀಪ್ ಸವಾರಿ ಮಾಡುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಮತ್ತೆ ಮೂವರ ನಡುವೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಫಿಲಿಪ್ ಮಾರ್ಟಿನ್, ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ:ಮದುವೆ ನಿಶ್ಚಿತಾರ್ಥಕ್ಕೆ ಹೊರಟ ಬಸ್​ ಪಲ್ಟಿ: ಮಗು ಸೇರಿ 8 ಮಂದಿ ಸಾವು, 45 ಜನರಿಗೆ ಗಾಯ

ABOUT THE AUTHOR

...view details