ಸೇಲಂ: ಆಸ್ತಿ ವಿವಾದಕ್ಕಾಗಿ ಸಂಬಂಧಿಸಿದಂತೆ ತನ್ನ ಸಹೋದರರು ಹೊಡೆದಾಡಿಕೊಂಡಿದ್ದು, ಈ ಗಲಾಟೆ ಓರ್ವನ ಸಾವಿನಲ್ಲಿ ಕೊನೆಯಾಗಿದೆ.
ಆಸೆ ಆಸ್ತಿ ಮಾಡ್ತು; ಅಣ್ಣನ ದುರಾಸೆ ತಮ್ಮನ ನಾಶ ಮಾಡ್ತು! - ತಮ್ಮನನ್ನೇ ಗುಂಡಿಕ್ಕಿ ಕೊಂದ ಅಣ್ಣ
ಶಿವಥಪುರಂನಲ್ಲಿ ಸಹೋದರನನ್ನು ಸ್ಥಳೀಯ ಗನ್ ಬಳಸಿ ತನ್ನ ಹಿರಿಯ ಸಹೋದರ ಕೊಂದಿದ್ದಾನೆ. ಘಟನೆಗೆ ಆಸ್ತಿ ವಿವಾದವೇ ಕಾರಣ ಎನ್ನಲಾಗಿದೆ.
![ಆಸೆ ಆಸ್ತಿ ಮಾಡ್ತು; ಅಣ್ಣನ ದುರಾಸೆ ತಮ್ಮನ ನಾಶ ಮಾಡ್ತು! Man shot dead by his brother for property dispute in Salem](https://etvbharatimages.akamaized.net/etvbharat/prod-images/768-512-11061854-thumbnail-3x2-nin.jpg)
ಆಸ್ತಿ ವಿವಾದಕ್ಕೆ ತಮ್ಮನನ್ನೇ ಗುಂಡಿಕ್ಕಿ ಕೊಂದ ಅಣ್ಣ
ಸೇಲಂ ಜಿಲ್ಲೆಯ ಶಿವಥಪುರಂನಲ್ಲಿ ತಮ್ಮನನ್ನು ಸ್ಥಳೀಯ ಗನ್ ಬಳಸಿ ತನ್ನ ಹಿರಿಯ ಸಹೋದರ ಕೊಂದಿದ್ದಾನೆ. ಮೃತನನ್ನು ಸೆಲ್ವಂ ಎಂದು ಗುರುತಿಸಲಾಗಿದೆ.
ಆರೋಪಿ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈವರೆಗೆ ಆತನನ್ನು ಬಂಧಿಸಿಲ್ಲ. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.