ಎರ್ನಾಕುಲಂ (ಕೇರಳ): ಕೋವಿಡ್ನಿಂದಾಗಿ ಎಲ್ಲಾ ನ್ಯಾಯಾಲಯಗಳು ಹೆಚ್ಚಾಗಿ ವರ್ಚುವಲ್ ವಿಚಾರಣೆ ನಡೆಸುತ್ತಿವೆ. ಮೊನ್ನೆ ಮಂಗಳವಾರ ಕೇರಳ ಹೈಕೋರ್ಟ್ ಕೂಡ ಪ್ರಕರಣವೊಂದರ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವ ವೇಳೆ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬ ಶೇವಿಂಗ್ (ಅಥವಾ ಬ್ರಶ್) ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವ್ಯಕ್ತಿಯು ಕ್ಯಾಮರಾ ಸ್ವಿಚ್ ಆಫ್ ಮಾಡಿದ್ದೇನೆಂದುಕೊಂಡು ಬಾತ್ ರೂಮ್ ಒಳಗೆ ಹೋಗಿ ಶೇವಿಂಗ್ ಮಾಡಿಕೊಳ್ಳುತ್ತಾ ನ್ಯಾಯಮೂರ್ತಿ ವಿ ಜಿ ಅರುಣ್ ಅವರ ಪೀಠ ನಡೆಸುತ್ತಿದ್ದ ನ್ಯಾಯಾಲಯದ ಕಲಾಪವನ್ನು ವೀಕ್ಷಿಸಿತ್ತಿದ್ದಾನೆ. ಆದರೆ ಸ್ವಿಚ್ ಆನ್ ಆಗಿದ್ದು, ನನ್ನನ್ನು ಇತರರು ನೋಡುತ್ತಿದ್ದಾರೆಂಬುದು ಆತನ ಅರಿವಿಗೆ ಬಂದಿಲ್ಲ. ಆತ ಶೇವ್ ಮಾಡುತ್ತಿದ್ದಾನೆಯೇ ಅಥವಾ ಬ್ರಶ್ ಮಾಡುತ್ತಿದ್ದಾನೆಯೇ ಎಂಬುದು ಸ್ಪಷ್ಟವಾಗಿ ಕಾಣುವುದಿಲ್ಲ.