ಗಂಜಾಂ (ಒಡಿಶಾ):ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಕುಡಿದ ಮತ್ತಿನಲ್ಲಿ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಬೈದ್ಯನಾಥಪುರ ಪೊಲೀಸ್ ವ್ಯಾಪ್ತಿಯ ಬಿದ್ಯಾ ನಗರದಲ್ಲಿ ಸಂಚಲನ ಮೂಡಿಸಿದೆ. ಆರೋಪಿ ಸಿಪ್ರಾನ್ ದಿಗಲ್ ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಮರಳಿದ್ದಾನೆ. ಈ ವೇಳೆ, ದಿಗಲ್ ಸಹೋದರಿ ಮನೆಯ ಹೊರಗೆ ಕುಳಿತುಕೊಂಡಿದ್ದಾರೆ. ಆದರೆ ಸಹೋದರಿಯ ಮಗಳು ಗಾಯತ್ರಿ ಮನೆಯೊಳಗೆ ಮಲಗಿದ್ದಳು.
ದಿಗಲ್ ಮನೆಯಲ್ಲಿಟ್ಟಿದ್ದ ಸೀಮೆಎಣ್ಣೆ ತೆಗೆದುಕೊಂಡು ಗಾಯತ್ರಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ನೋವು ತಾಳಲಾರದೇ ಗಾಯತ್ರಿ ಜೋರಾಗಿ ಕಿರುಚಿದ್ದಾಳೆ. ಇದನ್ನು ಕೇಳಿದ ಗಾಯತ್ರಿ ತಾಯಿ ಮತ್ತು ನೆರೆಹೊರೆಯವರು ಸ್ಥಳಕ್ಕೆ ಬಂದು ನೋಡಿದಾಗ ಮಗಳು ಬೆಂಕಿಯಲ್ಲಿ ಬೇಯುತ್ತಿರುವುದು ಕಂಡು ಬಂದಿದೆ. ಕೂಡಲೇ ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದಿಗಲ್ನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು.